ಹಿಜಾಬ್ ವಿವಾದದ ಹಿಂದೆ ISIS, KFD ಕೈವಾಡ ; ಉಡುಪಿಯಲ್ಲಿ ಸಚಿವ ಅಶೋಕ್
Saturday, February 19, 2022
ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಹಿಜಾಬ್ ವಿವಾದ ಹಿಂದೆ ಐಸಿಸ್ ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಅಂತ ಕಂದಾಯ ಸಚಿವ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಉಡುಪಿ ಕೊಕರ್ಣೆಯಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಿಜಾಬ್ ವಿವಾದದ ಹಿಂದೆ ಬಹಳಷ್ಟು ಜನ ಇದ್ದಾರೆ. ಹೋರಾಟ ಹಿಂದೆ ವಿದೇಶಿ ಕೈವಾಡ ಷಡ್ಯಂತ್ರ ಇದೆ ಎಂದರು.
ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ? ಹಿಜಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ?
ಇದರ ಹಿಂದೆ ಐಸಿಸ್ ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಅಂತ ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಶಾಲೆಗೆ ಹೋಗೋದು ವಿದ್ಯಾಭ್ಯಾಸಕ್ಕೆ ಧರ್ಮ ಪ್ರಚಾರಕ್ಕೆ ಶಾಲೆಗೆ ಹೋಗುತ್ತಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಯಾವುದೇ ಧರ್ಮವಾದರೂ ಶಾಲೆಗೆ ಹೋಗುವುದು ಧರ್ಮಪ್ರಚಾರಕ್ಕೆ ಅಲ್ಲ ಎಂದರು.
ನೀವು ನಿಮ್ಮ ಮನೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ ಶಾಲೆ-ಕಾಲೇಜಿಗೆ ಕೇವಲ ವಿದ್ಯೆ ಕಲಿಯಲು ಮಾತ್ರ ಹೋಗಿ ಹಿಜಬ್ ಹೋರಾಟ ಮಾಡಿ ಎಂದು ಐಸಿಎಸ್ ಹೇಳಿಕೊಟ್ಟಿದೆ ಮಕ್ಕಳು ಇರುವುದರಿಂದ ನಾವು ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ನಾವು ಹಂತಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಹಿಜಬ್ ಹೋರಾಟದ ಸಮಗ್ರ ತನಿಖೆ ಆಗಬೇಕು ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಹೋರಾಟದ ಹಿಂದಿನ ದುರುಳರು ಭಯೋತ್ಪಾದಕರನ್ನು ಹೊರಗೆ ಎಳೆಯಬೇಕಾಗಿದೆ ಅಂತ ಸಚಿವ ಅಶೋಕ್ ಹೇಳಿದ್ದಾರೆ.