-->

ಊರಿನ ಗಣ್ಯ ಮುಸ್ಲಿಂ ವ್ಯಕ್ತಿ ನಿಧನ ಹೊಂದಿದಾಗ ಆ ದೇವಸ್ಥಾನದ ಆಡಳಿತ ಮಂಡಳಿ ಮಾಡಿದ್ದೇನು ಗೊತ್ತಾ?

ಊರಿನ ಗಣ್ಯ ಮುಸ್ಲಿಂ ವ್ಯಕ್ತಿ ನಿಧನ ಹೊಂದಿದಾಗ ಆ ದೇವಸ್ಥಾನದ ಆಡಳಿತ ಮಂಡಳಿ ಮಾಡಿದ್ದೇನು ಗೊತ್ತಾ?

ಮಲಪ್ಪುರಂ/ ಕೇರಳ: ಇಲ್ಲಿನ ತ್ರಿಪ್ರಂಗೋಡಿನ ಬೀರಂಚಿರದ ಶ್ರೀ ಭಗವತೀ ಕ್ಷೇತ್ರದ ಉತ್ಸವದ ದಿನ ಆ ಊರಿನ ಮುಸ್ಲಿಂ ಗಣ್ಯ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಉತ್ಸವವನ್ನೇ ನಿಲ್ಲಿಸಿದ ಸೌಹಾರ್ದ ಘಟನೆ ನಡೆದಿದೆ.
.                        ಸಾಂದರ್ಭಿಕ ಚಿತ್ರ

ಶ್ರೀ ಭಗವತೀ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿತ್ತು. ಆ ವೇಳೆ ಆ ಊರಿನ ಗಣ್ಯ ವ್ಯಕ್ತಿ ಚೀರೋಟ್ಟಿಲ್ ಹೈದರ್ ಎಂಬವರು ಮೃತಪಟ್ಟ ಸುದ್ದಿ ತಿಳಿಯುತ್ತೆ. ಕೂಡಲೇ ದೇವಸ್ಥಾನದ ಆಡಳಿತ ಮಂಡಳಿ ಅದ್ದೂರಿ ಉತ್ಸವವನ್ನು ರದ್ದಪಡಿಸಿ ಕೇವಲ ಧಾರ್ಮಿಕ ವಿಧಿ ವಿಧಾನಕ್ಕಷ್ಟೇ ಉತ್ಸವವನ್ನು ಸೀಮಿತಗೊಳಿಸಲು ಸೂಚನೆ ನೀಡುತ್ತದೆ.

ಈ ಕ್ಷೇತ್ರದ ಉತ್ಸವದ ದಿನ ಹಿಂದೂಗಳ ಜೊತೆ ಮುಸ್ಲಿಮರೂ ಭಾಗವಹಿಸುವುದು ವಿಶೇಷ.

ಹೈದರ್ ಅವರ ಅಂತಿಮ ದರ್ಶನಕ್ಕೂ ಎಲ್ಲಾ ಧರ್ಮದವರೂ ಭೇಟಿ ನೀಡಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99