ಕೈಕೈ ಹಿಡಿದು ಶಾಲೆಗೆ ಬಂದ ಹಿಂದು ಮುಸ್ಲಿಮ್ ವಿದ್ಯಾರ್ಥಿನಿಯರು- ಇದು ನನ್ನ ಭಾರತ ಎಂದ ನೆಟ್ಟಿಗರು ( VIDEO)
Thursday, February 17, 2022
ಹಿಜಾಬ್ ವಿವಾದದ ಕೇಂದ್ರ ಬಿಂದು ಉಡುಪಿಯಲ್ಲೇ
ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರು ಕೈ ಕೈ ಹಿಡಿದು ಜ್ಞಾನ ದೇಗುಲಕ್ಕೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾರೀ ಪ್ರಶಂಸೆ ಪಡೆದಿದೆ.
ಹಿಜಾಬ್ ವಿವಾದ ಆರಂಭವಾದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿಗೆ ಧರ್ಮ ಬೇಧ, ವಿವಾದ ಗದ್ದಲ ಮರೆತು ನಾವು ಸ್ನೇಹಿತೆರು ಅಂತ ಕಾಲೇಜು ಕಾಂಪೌಂಡ್ ಪ್ರವೇಶ ಮಾಡುತ್ತಿರುವುದು ಮೊಬೈಲ್‌ನಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ನಮಗೆ ಬೇಕಿರುವ ವಿವಾದವಲ್ಲ, ಶಿಕ್ಷಣ. ವಿವಾದ ಆದಷ್ಟು ಬೇಗ ಬಗೆಹರಿದು ಇಂತ ದೃಶ್ಯಗಳು ಹೆಚ್ಚಾಗಲಿ, ವಿದ್ಯಾರ್ಥಿಗಳ ನಡುವೆ ಉಂಟಾದ ಕಂದಕ ದೂರವಾಗಲಿ ಅಂತ ಪ್ರತಿಕ್ರಿಯೆಗಳು ಪ್ರಜ್ಞಾವಂತ ಶಿಕ್ಷಣ ಪ್ರೇಮಿಗಳಿಂದ ಬರುತ್ತಿದೆ.