UDUPI ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ-ಕ್ಲಾಸ್ ಗೆ ಹೋಗದೆ ವಾಪಾಸು ಹೋದ ವಿದ್ಯಾರ್ಥಿನಿಯರು
Wednesday, February 16, 2022
ಉಡುಪಿಯ ಜಿ ಶಂಕರ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್‌ನಲ್ಲಿ ಇಂದು ಹಿಜಾಬ್ ವಿವಾದ ಭುಗಿಲೆದ್ದಿದೆ.
ಬೆಳಗ್ಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ತೆರಳಿದ್ದರು, ಈ ವೇಳೆ ಉಪನ್ಯಾಸಕರು ಹಿಜಾಬ್ ಧಾರಿ ವಿದ್ಯಾರ್ಥಿನಿಯರನ್ನು ಕಾಲೇಜ್ ಪ್ರಾಂಶುಪಾಲರ ಕೊಠಡಿಗೆ ಕಳುಹಿಸಿದ್ದು, ಪ್ರಾಂಶುಪಾಲರು ಸರ್ಕಾರದ ಆದೇಶವನ್ನು ಓದಿ ಹೇಳಿದ್ದಾರೆ.
ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು, ನಾವು ಹಿಂದಿನಿಂದಲೂ ಹಿಜಾಬ್ ಧರಿಸಿಯೇ ಪಾಠ ಕೇಳುತ್ತಿದ್ದೆವು ಹೀಗಾಗಿ ನಮಗೆ ಹಿಜಾಬ್‌ಗೆ ಅವಕಾಶ ನೀಡಬೇಕು ಅಂತ ಪಟ್ಟು ಹಿಡಿದು ಮನೆಗೆ ತೆರಳಿದ್ದಾರೆ, ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆದು ಪಾಠ ಕೇಳುದಿಲ್ಲ, ಮುಂದಿನ ಕೋರ್ಟ್ ಆದೇಶ ಬರುವವರೆಗೂ ನಾವು ಮನೆಯಲ್ಲೇ ಇರ್ತಿವಿ ಅಂತ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಬಳಿಕ ಮಾಧ್ಯಮ ಜೊತೆಗೆ ಮಾತನಾಡಿ ಕಾಲೇಜ್ ಪ್ರಾಂಶುಪಾಲರಾದ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ನ್ಯಾಯಾಲಯದ ಮಧ್ಯಂತರ ಆದೇಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದೇವೆ. ಕೆಲವರು ಬಿಜಾಪುರ್ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾರೆ. ಬೆರಳೆಣಿಕೆಯ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ಹೋಗಿದ್ದಾರೆ ತರಗತಿಗೆ ಬರೆದವರಿಗೆ ಆನ್ಲೈನ್ ಕ್ಲಾಸ್ ಮಾಡಲು ಚಿಂತನೆ ಮಾಡಿದ್ದೇವೆ, ವಿದ್ಯಾರ್ಥಿಗಳ ಪರೀಕ್ಷೆಗೆ ತೊಡಕು ಉಂಟಾಗದಂತೆ ಕಾಲೇಜಿನಿಂದ ಕ್ರಮ ಕೈಗೊಳ್ಳಲಾಗುವುದು ಅಂತ ಹೇಳಿದ್ದಾರೆ..