ಆಹಾ! ನೀಳ ಕೇಶರಾಶಿಯ ಯುವತಿಯರಿಗೆ ಸಿಕ್ತು ಭರಪೂರ ಬಹುಮಾನ- ಮಂಗಳೂರಿನಲ್ಲಿ ನಡೆದ ವಿನೂತನ ಸ್ಪರ್ಧೆ
Wednesday, February 16, 2022
ಮಂಗಳೂರು: ನಗರದ ಸ್ಪಿನ್ ಯುನಿಸೆಕ್ಸ್ ಸೆಲೂನ್ ಮಹಿಳೆರಿಗೆ ಮತ್ತು ಹೆಣ್ಣು ಮಕ್ಕಳಿಗೆ ನೀಳ ಕೇಶದ ಸ್ಪರ್ಧೆಯನ್ನು ಆಯೋಜಿಸಿದ್ದು, ಎರಡೂ ವಿಭಾಗಗಳಲ್ಲಿ ಸುಮಾರು 120ಕ್ಕೂ ಹೆಚ್ಚು ಉದ್ದ ತಲೆಗೂದಲಿನ ಸ್ಪರ್ಧಿಗಳು ಭಾಗವಹಿಸಿದ್ದರು.
ಮಹಿಳೆಯರ ವಿಭಾಗದಲ್ಲಿ 48 ಇಂಚು ಉದ್ದದ ಕೇಶ ಹೊಂದಿದ್ದ ಕಾವ್ಯ ಶೆಟ್ಟಿ ಪ್ರಥಮ ಸ್ಥಾನ ಪಡೆದರೆ 45 ಇಂಚು ಉದ್ದದ ತಲೆಗೂದಲಿನ ರಶ್ಮಿತಾ ದ್ವಿತೀಯ ಸ್ಥಾನ ಪಡೆದರು.
ಮಕ್ಕಳ ವಿಭಾಗದಲ್ಲಿ 41 ಇಂಚು ನೀಳವಾದ ಕೇಶ ಹೊಂದಿದ್ದ ಹರ್ಷಿತಾ ಪ್ರಥಮ ಸ್ಥಾನ ಪಡೆದರೆ 36 ಇಂಚು ಉದ್ದದ ಕೇಶರಾಶಿಯ ಅನ್ವಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗದ ಪ್ರಥಮ ಸ್ಥಾನಿಗೆ 10 ಸಾವಿರ ರೂ.ನಗದು ಮತ್ತು ಅದೇ ಮೌಲ್ಯದ ಗಿಫ್ಟ್ ವೋಚರ್, ದ್ವಿತೀಯ ಸ್ಥಾನಿಗೆ 6 ಸಾವಿರ ರೂ ನಗದು ಮತ್ತು ಅದೇ ಮೌಲ್ಯದ ಗಿಫ್ಟ್ ವೋಚರ್ ಹಾಗೂ ತೃತೀಯ ಸ್ಥಾನಿಗೆ ಮೂರು ಸಾವಿರ ರೂ. ನಗದು ಮತ್ತು ಅದೇ ಮೌಲ್ಯದ ಗಿಫ್ಟ್ ವೋಚರ್ ನೀಡಲಾಯಿತು.
ಇನ್ನು ಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಮೂರು ಸಾವಿರ ರೂ. ನಗದು ಮತ್ತು ಅದೇ ಮೌಲ್ಯದ ಗಿಫ್ಟ್ ವೋಚರ್, ದ್ವಿತೀಯ ಸ್ಥಾನ ಪಡೆದವರಿಗೆ 2 ಸಾವಿರ ರೂ. ನಗದು ಮತ್ತು ಅದೇ ಮೌಲ್ಯದ ಗಿಫ್ಟ್ ವೋಚರ್ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಒಂದು ಸಾವಿರ ರೂ. ನಗದು ಮತ್ತು ಅದೇ ಮೌಲ್ಯದ ಗಿಫ್ಟ್ ವೋಚರ್ ನೀಡಲಾಯಿತು.