ನಾಳೆ College ಆರಂಭ ; ಉಡುಪಿಯಲ್ಲಿ ಬಿಗಿ ಭದ್ರತೆ
Tuesday, February 15, 2022
ರಾಜ್ಯ ಸರ್ಕಾರ ದ ಆದೇಶದಂತೆ ರಾಜ್ಯದಲ್ಲಿ ನಾಳೆಯಿಂದ ಕಾಲೇಜುಗಳು ಆರಂಭಗೊಳ್ಳಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ 144 ಸೆಕ್ಷನ್ ಮುಂದುವರಿಸಿ, ಪೊಲೀಸ್ ಭಧ್ರತೆ ನಿಯೋಜನೆ ಮಾಡಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್,
ಜಿಲ್ಲೆಯಲ್ಲಿ ಎಲ್ಲಾ ಬಂದೋಬಸ್ತ್ ಮಾಡಿದ್ದೇವೆ. ಹಲವಾರು ಶಾಂತಿಸಭೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಜಿಲ್ಲೆಯಲ್ಲಿ ಎಲ್ಲಾ ಠಾಣೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದರು. 8 Dar, 2 ksrp ಜಿಲ್ಲೆಯಾದ್ಯಂತ ನಿಯೋಜನೆ ಆಗಲಿದೆ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ
ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲಾಗುವುದು ಅಂತ ಮಾಹಿತಿ ನೀಡಿದರು.