HIJAB ಪ್ರಕರಣ- ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ
Tuesday, February 15, 2022
ನಾಳೆ ಕಾಲೇಜ್ ಆರಂಭ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎನ್ನುವ ಉದ್ದೇಶದಿಂದ ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಕರೆಯಲಾಯಿತು.
ಜಿಲ್ಲಾಧಿಕಾರಿ ಕೂರ್ಮಾರಾವ್, ಶಾಂತಿ ಸಭೆಯಲ್ಲಿ ನಾಳೆ ಕಾಲೇಜ್ ಆರಂಭ ಆಗಲಿದ್ದು ಶಾಂತಿ ಭಂಗವಾಗುವ ರೀತಿಯಲ್ಲಿ ವರ್ತಿಸದಂತೆ ಕೋರಿದ್ದರು. ಶಾಂತಿ ಸಭೆಯಲ್ಲಿ ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಸೇರಿದಂತೆ ಹಿಂದೂ ಸಂಘಟನೆ ಮುಖಂಡರು, ಮುಸ್ಲಿಂ ಸಂಘಟನೆಯವರು ಹಾಗೂ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದವರು ಆಗಮಿಸಿದರು. ಶಾಂತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ, ಹೈಕೋರ್ಟ್ ಆದೇಶ ಪಾಲಿಸಬೇಕು ಎಂಬುದು ಸಭೆಯ ಉದ್ದೇಶ ಶಾಂತಿ ಸಭೆಯ ಉದ್ದೇಶ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾತುಕತೆ ಮಾಡಲಾಗಿದೆ. ನೆಲದ ಕಾನೂನು ಪಾಲಿಸುವಂತೆ ಕೋರಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಲಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ
ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುತ್ತಾರೆ
ಉಚ್ಚನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ
ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು ಶೈಕ್ಷಣಿಕ ವಾತಾವರಣ ಯಾರೂ ಕೆಡಿಸಬಾರದು ಅಂತ ಶಾಂತಿ ಸಭೆಯಲ್ಲಿ ಮನವಿ ಮಾಡಿದ್ದಾಗಿ ಹೇಳಿದ್ದಾರೆ..