ಅಪ್ರಾಪ್ತೆ ಬಾಲಕಿ ಜೊತೆ ಲೈಂಗಿಕ ಸಂಬಂಧ ಹೊಂದಿದ: ಮರುದಿನ ಬೈಕ್‌ನಲ್ಲಿ ಹೋಗುವಾಗ ಜಗಳವಾಡಿದ: ಕೆಳಗೆ ಬಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಬಯಲಾಗ ತೊಡಗಿತು ಒಂದೊಂದೇ ರಹಸ್ಯ
Wednesday, February 16, 2022
ತಿರುವನಂತಪುರಂ: ಅಪ್ರಾಪ್ತ ಶಾಲಾ ಬಾಲಕಿಯನ್ನು ಪುಸಲಾಯಿಸಿ ಆಕೆಯ ಜೊತೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿ ಯುವಕನೋರ್ವ ಇದೀಗ ಪೊಲೀಸರ ಬಲೆಗೆ ಪೋಸ್ಕೋ ಕಾಯಿದೆಯಡಿ ಜೈಲು ಸೇರಿರುವ ಘಟನೆ ಕೊಲ್ಲಂ ಜಿಲ್ಲೆಯ ಕಡೈಕಲ್ ಎಂಬಲ್ಲಿ ನಡೆದಿದೆ.
ಇಲ್ಲಿನ ಶಾಲಾ ಬಾಲಕಿ ಜೊತೆ ಧನಿಲ್ ಎಂಬ ಯುವಕ ಲೈಂಗಿಕ ಸಂಪರ್ಕ ಬೆಳೆಸಿದ್ದ. ಒಂದು ದಿನ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಭೋಗಿಸಿದ್ದ. ಬಳಿಕ ಅದೇನೋ ಕಾರಣದಿಂದ ಅವರಿಬ್ಬರ ನಡುವೆ ಬಿರುಕು ಉಂಟಾಗಿತ್ತು. ಬಾಲಕಿ ಆತನ ಜೊತೆ ಮಾತು ಬಿಟ್ಟಿದ್ದಳು.
ಒಂದು ದಿನ ಆಕೆ ಶಾಲೆಗೆ ಹೋಗುವಾಗ ಧನಿಲ್ ಬಾಲಕಿಯನ್ನು ಮತ್ತೆ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದು, ಈ ವೇಳೆ ಅವರಿಬ್ಬರ ನಡುವೆ ಜಗಳ ಉಂಟಾಗಿದೆ. ಜಗಳದ ವೇಳೆ ಬಾಲಕಿಯ ಮೊಬೈಲ್ ಫೋನ್ ಕೆಳಗೆ ಬಿದ್ದಿದ್ದು, ಇದನ್ನು ತಡೆಯಲೆತ್ನಿಸಿದಾಗ ಬಾಲಕಿಯು ಬಿದ್ದಿದ್ದಾಳೆ. ಕೂಡಲೇ ಬಾಲಕಿಯ ಪ್ರಿಯಕರ ಧನಿಲ್ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರಿಗೆ ಈಕೆಯ ಮೇಲೆ ಲೈಂಗಿಕ ದೌರ್ಜನ್ಯ ವಾದ ಮಾಹಿತಿ ತಿಳಿದುಬಂದಿತ್ತು.
ಬಾಲಕಿಯನ್ನು ಸಂಪೂರ್ಣ ವಿಚಾರಿಸಿದಾಗ ಆಕೆ ಎಲ್ಲವನ್ನೂ ಬಾಯಿ ಬಿಟ್ಟಿದ್ದಾಳೆ. ಕೂಡಲೇ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಯುವಕನ ಮೇಲೆ ಪೋಕ್ಸೋ ಅನ್ವಯ ಕೇಸು ದಾಖಲಿಸಿದ್ದಾರೆ.