
ಉಡುಪಿ- ಬಾವಿಗೆ ಬಿದ್ದ ಕುರಿಗಳ ರಕ್ಷಣೆ ( Video)
Wednesday, February 23, 2022
ಬಾವಿಗೆ ಬಿದ್ದ ಮೂರು ಕುರಿಗಳನ್ನ ಉಡುಪಿ ಅಗ್ನಿ ಶಾಮಕ ದಳದ ಸಿಬಂದಿ ರಕ್ಷಣೆ ಮಾಡಿದ ಘಟನೆ ಉಡುಪಿಯ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಬಳಿ ನಡೆದಿದೆ.
ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಸಮೀಪವಿರುವ ಮನೆಯೊಂದರಲ್ಲಿ ಸಾಕಿದ್ದ ಮೂರು ಕುರಿಗಳು ಅಕಸ್ಮಿಕವಾಗಿ ಬಾವಿಗೆ ಬಿದ್ದಿತ್ತು.
ಇದನ್ನು ಗಮನಿಸಿ ಮನೆಯವರು ಕೂಡಲೇ ಅಗ್ನಿಶಾಮಕದಳಕ್ಕೆ ತಿಳಿಸಿದ್ದು, ತಕ್ಷಣ ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳದ ಸಿಬಂದಿ ಬಾವಿಗಿಳಿದು ಮೂರುಕುರಿಗಳನ್ನ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.