ಉಡುಪಿಯಲ್ಲಿ ಆಸ್ಪತ್ರೆ ಸಿಬ್ಬಂದಿಗಳಿಗೆ ಸಿಗದ ವೇತನ- ಪಾತ್ರೆ ಪಗಡಿಗಳನ್ನು ಇಟ್ಟು ವಿನೂತನ ರೀತಿ ಪ್ರತಿಭಟನೆ (Video)
Wednesday, February 23, 2022
ಉಡುಪಿಯ ಬಿ.ಆರ್ ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತೆ ಗೊಂದಲದ ಗೂಡಾಗಿದೆ.
ಒಂದು ಕಡೆಯಲ್ಲಿ ವೇತನ ನೀಡುವಂತೆ ಸಿಬ್ಬಂದಿ ಆಗ್ರಹ ಮಾಡುತ್ತಿದ್ದರೆ ಇನ್ನೊಂದು ಕಡೆಯಲ್ಲಿ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಲ್ಕು ತಿಂಗಳಿಂದ ವೇತನವಿಲ್ಲದೆ ಸಿಬ್ಬಂದಿಗಳು ಅತಂತ್ರದಲ್ಲಿದ್ದು ವೇತನ ನೀಡದೇ ಕರ್ತವ್ಯಕ್ಕೆ ಹಾಜರಾಗೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಅನೇಕ ಸಂಘಟನೆಗಳು ಈ ಪ್ರತಿಭಟನೆಗೆ ಸಾಥ್ ನಿಡಿದ್ದು ಬುಧವಾರ ನಾಗರೀಕ ಸಮಿತಿಯ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಸಿತು.
ಆಸ್ಪತ್ರೆ ಮುಂದೆ ಪಾತ್ರೆ ಪಗಡಿಗಳನ್ನು ಇಟ್ಟು ವಿನೂತನ ರೀತಿ ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ಶೀಘ್ರವಾಗಿ ವೇತನ ಪಾವತಿಸುವಂತೆ ಆಗ್ರಹಿಸಿದರು.