ಉಡುಪಿ; ವಿವಾದ ಆರಂಭಿಸಿದ ವಿದ್ಯಾರ್ಥಿನಿಯರಿಂದ ಹೊಸ ಬೇಡಿಕೆ- (Video)
Wednesday, February 23, 2022
ಹಿಜಾಬ್ ವಿವಾದ ಆರಂಭಿಸಿದ ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಕೆಲ ದಿನಗಳ ಕಾಲ ಮಾಧ್ಯಮದಿಂದ ಅಂತರ ಕಾಯ್ದುಕೊಂಡು, ಇಂದು ದಿಢೀರ್ ಆಗಿ ಮಾಧ್ಯಮ ಮುಂದ ಕಾಣಿಸಿಕೊಂಡು ಹೊಸ ಬೇಡಿಕೆ ಇಟ್ಟಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಆರು ಮಂದಿ ವಿದ್ಯಾರ್ಥಿನಿಯರು, ಮುಂದೆ ನಡೆಯಲಿರುವ ಪರೀಕ್ಷೆಯನ್ನು ಮುಂದೂಡಿ, ಹೈ ಕೋರ್ಟ್ ತೀರ್ಪು ಬರುವವರೆಗೂ ಕಾಲೇಜುಗಳು ಕಾಯಬೇಕು..ಕಾಲೇಜುಗಳು ಪರೀಕ್ಷೆ ಗಳನ್ನು ಮುಂದೂಡಬೇಕು..ಹಿಜಾಬ್ ಪ್ರಕರಣ ಇತ್ಯರ್ಥ ಆದ ಬಳಿಕ ಪರೀಕ್ಷೆಗಳನ್ನು ಮಾಡಬೇಕು..ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಇಷ್ಟೇ ಅಲ್ಲದೇ ಹಿಜಾಬ್ ಸಂಘರ್ಷದಿಂದ ನಮ್ಮ ನೆಮ್ಮದಿ ಹಾಳಾಗಿದೆ. ನಮ್ಮ ಖಾಸಗಿತನಕ್ಕೆ ದಕ್ಕೆಯಾಗಿದೆ. ಹಿಜಾಬ್ ವಿಚಾರ ಇಟ್ಟುಕೊಂಡು ಶೀಫಾ ಅಣ್ಣ ಮೇಲೆ ದಾಳಿ ಮಾಡಿದ್ದಾರೆ. ಇಷ್ಟೇ ಅಲ್ಲದೇ ನಮ್ಮ ಕಾಲೇಜಿನ ದಾಖಲೆಗಳು ಬಿಡುಗಡೆ ಮಾಡಿದ ಕಾರಣ ನಮ್ಮ ನಂಬರ್ ಗೊತ್ತಾಗಿ ಅನಾಮಿಕರಿಂದ ಬೆದರಿಕೆ ಕರೆಗಳು ಬರ್ತಾ ಇದೆ ಅಂತ ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದರು.
.