ಕುಂದಾಪುರದ ಕಾಲೇಜ್ PRO ನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ - ಸಿಡಿದೆದ್ದ ವಿದ್ಯಾರ್ಥಿಗಳು
Thursday, February 24, 2022
ಉಡುಪಿಯ ಕುಂದಾಪುರದ ಸಂಗಮ್ ನಲ್ಲಿರುವ ಬಿಬಿ ಹೆಗ್ಡೆ ಕಾಲೇಜನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಅಂತ ಆರೋಪಿಸಿ ಕಾಲೇಜು ಮುಂಬಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರಿಗೆ ಒಡೆತನದ, ಉಡುಪಿಯ ಬಿಬಿ ಹೆಗ್ಡೆ ಕಾಲೇಜಿನ PRO ನಾಗರಾಜ್ ಶೆಟ್ಟಿ, ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ, ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡುವ ಈ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲವಂತೆ, ಹೀಗಾಗಿ ಕಾಲೇಜಿನ ಮುಂದೆ ಧರಣಿ ನಡೆಸಿದ ವಿದ್ಯಾರ್ಥಿಗಳು ಪಿಆರ್‌ಒ ನಾಗರಾಜ್ ಶೆಟ್ಟಿಯನ್ನು PRO ಹುದ್ದೆಯಿಂದ ಕಿತ್ತು ಹಾಕಿ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.
ಸ್ಕಾಲರ್‌ಶಿಫ್, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಚಾರದಲ್ಲಿ ಹಾಗೂ ಹಳೆ ವಿದ್ಯಾರ್ಥಿನಿಯರಿಗೆ ಕೆಲಸ ಕೊಡಿಸುವ ನೆಪದಲ್ಲಿ ಸಂದೇಶ ಕಳುಹಿಸಿ ನಂತರ ಆಶ್ಲೀಲ ಮೆಸೇಜ್ ಮಾಡ್ತಾನಂತೆ, ಅಲ್ಲದೇ ರಾತ್ರಿ ಹಗಲು ಎನ್ನದೇ ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡುವ ಬಗ್ಗೆ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಪಿಆರ್‌ಓವನ್ನು ವಜಾಗೊಳಿಸುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ ಅಂತ ಮನವಿಯನ್ನು ಕಾಲೇಜು ಪ್ರಾಂಶುಪಾಲರಿಗೆ ಸಲ್ಲಿಸಿದ್ದಾರೆ..