
ಉಡುಪಿ- MGM ಕಾಲೇಜಿನಲ್ಲಿ ಮತ್ತೆ ಹಿಜಾಬ್ ಗೊಂದಲ ( VIDEO)
ಕೆಲವು ದಿನಗಳ ಹಿಂದೆ ಬಹಳ ದೊಡ್ಡ ಮಟ್ಟದಲ್ಲಿ ಕೇಸರಿ ವರ್ಸಸ್ ಹಿಜಾಬ್ ಸಂಘರ್ಷ ನಡೆದ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಗೊಂದಲ ನಿರ್ಮಾಣ ಆಗಿದೆ.
ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್ ಕಾಂಪೌಂಡ್ ಎದುರಿನಲ್ಲಿ ಹೈ ಡ್ರಾಮ ನಡೆಸಿದರು. ನಮಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಈಗ ತರಗತಿ ಅಟೆಂಡ್ ಆಗಲು ಕೂಡ ಬಿಡುತ್ತಿಲ್ಲ. ಸರ್ಕಾರದ ಆದೇಶ ಇರೋದು ಕೇವಲ ತರಗತಿಗೆ ತೆರಳಬಾರದು ಅಂತ ಅದ್ರೆ ನಮ್ಮನ್ನು ಕಾಲೇಜು ಆವರಣದ ಒಳಗೆ, ಗ್ರಂಥಾಲಯಕ್ಕೂ ಬಿಡ್ತಾ ಇಲ್ಲ ಅಂತ ಆಕ್ರೋಶ ಹೊರ ಹಾಕಿದ್ದರು.
ಇನ್ನೂ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಯಾವುದೇ ಸೂಚನೆ ಬಂದಿಲ್ಲ. ನಮಗೆ ಕ್ಯಾಂಪಸ್ ನ ಒಳಗೆ ನಿಲ್ಲಲು ಬಿಟ್ಟಿಲ್ಲ ಎಂದು ವಿದ್ಯಾರ್ಥಿನಿಯರು ಅಳಲನ್ನು ತೋಡಿಕೊಂಡರು.
ಹಿಜಾಬ್ ವಿವಾದ ಹಿನ್ನಲೆಯಲ್ಲಿ ಎಂಜಿಎಂ ಕಾಲೇಜಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.