ಹಿಜಾಬ್ ಕುರಿತು NIA ತನಿಖೆ ಮಾಡಿ; ರಘಪತಿ ಭಟ್ ಆಗ್ರಹ ( VIDEO)
Friday, February 11, 2022
ಉಡುಪಿಯ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಸದ್ಯ ವಿದ್ಯಾರ್ಥಿನಿಯರು ಕಳೆದ ನವೆಂಬರ್ ನಿಂದಲೇ ಹಿಜಾಬ್ ವಿವಾದ ಹೇಗೆ ಮಾಡಬೇಕು ಅಂತ ಯೋಜನೆ ರೂಪಿಸಿದ್ರು, ಇದಕ್ಕೆ ಇವರ ಸರಣಿ ಟ್ವಿಟ್‌ಗಳೇ ಉದಾಹರಣೆ. ಈ ಪ್ರಕರಣದ NIA ತನಿಖೆಯನ್ನು ನಡೆಸಬೇಕು ಎಂದು ಶಾಸಕ ರಘಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, , ವಿದ್ಯಾರ್ಥಿನಿಯರು ನವೆಂಬರ್‌ನಲ್ಲಿ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಜೊತೆಗೆ ಸೇರಿಕೊಂಡಿದ್ದಾರೆ. ಬಳಿಕ ಟ್ವಿಟರ್ ಖಾತೆ ತೆರೆದು, ಬಾಬರಿ ಮಸೀದಿ ತೀರ್ಪು ವಿರುದ್ಧ, ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಹೀಗೆ ವಿವಿಧ ಟ್ವಿಟ್ ಮಾಡಿದ್ರು, ಇವರ ಟ್ವಿಟ್‌ಗೆ ಪ್ರತಿಯಾಗಿ ಸಿಎಫ್‌ಐ ರಾಷ್ಟಾಧ್ಯಕ್ಷರು ರೀ ಟ್ವೀಟ್ ಮಾಡಿದ್ದಾರೆ, ಇದರಿಂದಲೇ ಗೊತ್ತಗುತ್ತದೆ ವಿದ್ಯಾರ್ಥಿನಿಯರು ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಜೊತೆಗೆ ನವೆಂಬರ್ ನಿಂದ ಸೇರಿಕೊಂಡಿರುವುದು ಅಂತ ರಘಪತಿ ಭಟ್ ಹೇಳಿದ್ದಾರೆ.
ಅಲ್ಲದೆ ವಿದ್ಯಾರ್ಥಿನಿಯರಿಗೆ ಹೈದರಾಬಾದ್ ಕೇರಳದ ಟ್ರೈನರ್‌ಗಳು ಬಂದು ತರಬೇತಿ ನೀಡಿತ್ತಿದ್ದಾರೆ ಇದರ ಕುರಿತು ಎನ್‌ಐಎ ತನಿಖೆ ಮಾಡಬೇಕು ಅಂತ ಶಾಸಕ ರಘಪತಿ ಭಟ್ ಆಗ್ರಹಿಸಿದ್ದಾರೆ.