ಉಡುಪಿ-ವಿವಾದಕ್ಕೆ ಕಾರಣವೇ ABVP ಪ್ರೋಟೆಸ್ಟ್?
Thursday, February 10, 2022
ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆಗ್ತಾ ಇರೋ ಹಿಜಾಬ್ ವಿವಾದಕ್ಕೆ ಮೂಲ ಕಾರಣ ಎಬಿವಿಪಿಯ ಪ್ರತಿಭಟನೆಯೇ ಎನ್ನುವ ಹೊಸ ಚರ್ಚೆ ಶುರುವಾಗಿದೆ.
ಉಡುಪಿಯ ಮಣಿಪಾಲದ ಡಿಸಿ ಕಚೇರಿ ಮುಂಬಾಗ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಹಿಜಾಬ್‌ಗೆ ಅವಕಾಶ ಬೇಕು ಅಂತ ಹೋರಾಟ ನಡೆಸುತ್ತಿರುವ ಆರು ಮಂದಿ ವಿದ್ಯಾರ್ಥಿನಿಯರು ಕೂಡ ಭಾಗವಹಿಸಿದ್ದರು, ಇದನ್ನು ನೋಡಿದ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ, ಮುಸ್ಲಿಂ ವಿದ್ಯಾರ್ಥಿನಿಯರನ್ನು ನೀವು ಎಬಿವಿಪಿ ಪ್ರತಿಭಟನೆಗೆ ಹೋಗಬಾರದು, ನೀವು ಹಿಜಾಬ್‌ಗಾಗಿ ಹೋರಾಟ ಮಾಡಬೇಕು ಅಂತ ವಿದ್ಯಾರ್ಥಿನಿಯರ ಮನ ಪರಿವರ್ತನೆ ಮಾಡಿದ್ದಾರೆ ಅಂತ ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.
ಇನ್ನೂ ವಿದ್ಯಾರ್ಥಿನಿಯರು ಎಬಿವಿಪಿ ಪ್ರತಿಭಟನೆಯಲ್ಲಿ ನಾವು ಭಾಗವಹಿಸಿದ್ದು ಹೌದು, ಆದರೆ ನಾವು ಪ್ರತಿಭಟನೆಗೆ ತೆರಳುವಾಗ ಎಬಿವಿಪಿ ವತಿಯಿಂದ ನಡೆಯುವ ಪ್ರತಿಭಟನೆ ಅಂತ ಹೇಳಿಲ್ಲ ನಂತರ ಎಬಿವಿಪಿ ಬ್ಯಾನರ್ ಬಳಸಿದ್ದಾರೆ ಅಂತ ಹೇಳಿದ್ದಾರೆ..