UDUPI- ನಾವ್ಯಾಕೆ ಪಾಕಿಸ್ತಾನಕ್ಕೆ ಹೋಗ್ಬೇಕು? ಅಲಿಯಾ ಪ್ರಶ್ನೆ
Thursday, February 10, 2022
ವಿವಾದಕ್ಕೆ ಮೂಲ ಕಾರಣ ಶಾಸಕ ರಘಪತಿ ಭಟ್, ನಮ್ಮನ್ನು ಬಿಜೆಪಿಯವರು ಹಿಜಾಬ್ ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ, ನಾವ್ಯಾಕೆ ಪಾಕಿಸ್ತಾನಕ್ಕೆ ಹೋಗಬೇಕು ಇದು ನಮ್ಮ ದೇಶ ಇಲ್ಲೇ ಹುಟ್ಟುತ್ತೇವೆ ಇಲ್ಲೇ ಸಾಯುತ್ತೇವೆ ಅಂತ ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ಅಲಿಯಾ ಖಾರವಾಗಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅಲಿಯಾ, ಈ ಸಣ್ಣ ವಿಚಾರವನ್ನು ರಘಪತಿ ಭಟ್ ಮಾತುಕತೆ ಯ ಮೂಲಕ ಬಗೆಹರಿಸಬಹುದಿದ್ದರೂ, ವಿಚಾರವನ್ನು ಕೋಮುವಾದ ಬಣ್ಣಕ್ಕೆ ತಿರುಗಿಸಿದರು. ಹಿಜಾನ್ ಧರಿಸಿದರೆ ಕೇಸರಿ ಶಾಲು ಧರಿಸುತ್ತಾರೆ ಅಂತಾ ಮೊದಲು ರಘಪತಿ ಭಟ್ ಅವರೇ ಹೇಳಿದ್ದಾರೆ.
ಆ ಬಳಿಕ ಕೇಸರಿ ಶಾಲು ಹಾಕೋಕೆ ಆರಂಭವಾಯಿತು ಹೀಗಾಗಿ ಹಿಜಾಬ್ ವಿವಾದಕ್ಕೆ ಮೂಲ ಕಾರಣವೇ ರಘಪತಿ ಭಟ್ ಅಂತ ಹೇಳಿದ್ದಾರೆ. ಅಲ್ಲದೇ ಶಾಸಕ ಭಟ್ ಬಿಡುಗಡೆ ಮಾಡಿರುವ ದಾಖಲೆಗಳನ್ನು ನಿರಾಕರಿಸಿತರುವ ಆಲಿಯಾ, ಇದು ಸುಳ್ಳು ಅಸೆಂಬ್ಲಿ ಪೋಟೋದಲ್ಲಿ ನಾವು ಇಲ್ಲ ಅಂತ ಅಲಿಯಾ ಹೇಳಿಕೆ ನೀಡಿದ್ದಾರೆ..