ವೃಂದಾ ಕೊನ್ನಾರ್ CA ಪರೀಕ್ಷೆಯಲ್ಲಿ ಉತ್ತೀರ್ಣ
Friday, February 11, 2022
ಮಂಗಳೂರು:ವೃಂದಾ ಕೊನ್ನಾರು ರವರು ಡಿಸೆಂಬರ್ ನಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಸಿ.ಎ ಅಂತಿಮ ಪರೀಕ್ಷೆ ಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಈಕೆ ಮಂಗಳೂರಿನ ಸಿಎ ಬಿ.ಸುದೇಶ್ ಕುಮಾರ್ ರೈ ಇವರಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ಸುರತ್ಕಲ್ ಗೋವಿಂದಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದು , ಬಹುಮುಖ ಪ್ರತಿಭೆ ಯಾಗಿರುತ್ತಾರೆ.
ಯಕ್ಷಗಾನ, ನಾಟಕ, ನಿರೂಪಣೆ,ಭಾಷಣ, ಕ್ರೀಡೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.
ಬೈಕಂಪಾಡಿ ಕೊನ್ನಾರ್ ನಿವಾಸಿಗಳಾದ ಬಿ.ಸುಬ್ಬ ರಾವ್ ಮತ್ತು ವಿದ್ಯಾ ಎಸ್ ರಾವ್ ದಂಪತಿಗಳ ಪುತ್ರಿಯಾಗಿದ್ದಾರೆ.