
ಹಿಜಾಬ್ ವಿವಾದ- ವಿದ್ಯಾರ್ಥಿನಿಯರು ಸುಳ್ಳು ಹೇಳುತ್ತಿದ್ದಾರೆ; Udupi ಕಾಲೇಜಿನ ಪ್ರಾಂಶುಪಾಲ
Friday, February 11, 2022
ಹಿಜಾಬ್ ವಿವಾದ ದಿನಕ್ಕೊಂದು ಆಯಾಮಗಳನ್ನು ಪಡೆಯುತ್ತಿದೆ. ವಿವಾದ ಮೊದಲು ಆರಂಭ ಮಾಡಿದ ಉಡುಪಿ ಸರ್ಕಾರಿ ಪಿಯು ಕಾಲೇಜ್‌ನ ವಿದ್ಯಾರ್ಥಿನಿಯರ ವಿರುದ್ದ ಕೆಲ ಆರೋಪಗಳು ಕೇಳಿ ಬರುತ್ತಿದೆ.
ಸದ್ಯ ಇದೇ ವಿಚಾರವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು, ವಿದ್ಯಾರ್ಥಿನಿಯರು ಒಂದು ತಿಂಗಳಿಂದ ಅ ಶಿಸ್ತು ತೋರುತ್ತಿದ್ದಾರೆ. ಹಿಂದಿನಿಂದಲೂ ಕಾಲೇಜಿನಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ, ವಿದ್ಯಾರ್ಥಿನಿಯರು ಸುಳ್ಳು ಹೇಳ್ತಾ ಇದ್ದಾರೆ.
ಅವರ ವಾಕ್ ಚಾತುರ್ಯ,ಸಂವಿಧಾನದ ಕಾನೂನು ಬಗೆಗಿನ ತಿಳುವಳಿಕೆ ನೋಡೋವಾಗ ಖುಷಿ ಆಗುತ್ತದೆ.. ಆದರೆ ಜ್ಞಾನ ಸದುಪಯೋಗ ಆದರೆ ಚೆನ್ನಾಗಿರುತ್ತದೆ. ಕಾಲೇಜು ಆರಂಭವಾದಗಿನಿಂದ ಇಂತಹ ಅಹಿತಕರ ಘಟನೆ ಆಗಿಲ್ಲ ಎಂದರು.
ಆದರೆ ಈಗ ಇಲ್ಲೇ ವಿವಾದ ಆರಂಭವಾಗಿ ರಾಜ್ಯದಲ್ಲಿ ಸಂಘರ್ಷವಾಗಿದ್ದು ನೋಡಿ ಬೇಸರ ಆಗಿದೆ..ಆದರೂ ವಿದ್ಯಾರ್ಥಿನಿಯರ ಬಗ್ಗೆ ನಮಗೆ ಅನುಕಂಪ ಇದೆ. ವಿವಾದ ಮುಗಿದ ನಂತರ ಕಾಲೇಜು ಬಂದ್ರೆ ಹಿಂದಿನಂತೆಯೇ ಪಾಠ ಮಾಡ್ತೀವಿ, ಯಾವುದೇ ದ್ವೇಷ ವಿದ್ಯಾರ್ಥಿನಿಯರಲ್ಲಿ ಸಾಧಿಸುದಿಲ್ಲ ಅಂತ ಪ್ರಾಂಶುಪಾಲರು ಹೇಳಿದ್ದಾರೆ.