
ಹಿಜಾಬ್ ವಿಚಾರಣೆ: ವಕೀಲ ರಹ್ಮತುಲ್ಲಾ ಕೊತ್ವಾಲ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್: ಯಾಕೆ ಗೊತ್ತಾ
Thursday, February 17, 2022
ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ (ಶಿರ ವಸ್ತ್ರ) ಧಾರಣೆ ಕುರಿತಂತೆ ಹೈಕೋರ್ಟ್ ನಲ್ಲಿ ಇಂದು ಮತ್ತೆ ವಾದ ಮುಂದುವರಿದಿದ್ದು, ಈ ವೇಳೆ ವಾದಿಸುತ್ತಿದ್ದ ವಕೀಲ ರಹ್ಮತುಲ್ಲಾ ಕೊತ್ವಾಲ್ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿದಾರ ಪರವಾಗಿ ವಾದಿಸುತ್ತಿದ್ದ ವಕೀಲ ರಹಮತುಲ್ಲಾ ಪಿಐಎಲ್ ಅನ್ನು ಕ್ರಮವಾಗಿ ಸಲ್ಲಿಸಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ತ್ರಿ ಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ಅಲ್ಲದೇ ತಾವು ಇಂತಹ ಗಂಭೀರ ಸಂದರ್ಭದಲ್ಲಿ ಕೋರ್ಟ್ ನ ಸಮಯ ವ್ಯರ್ಥ ಮಾಡಿದ್ದೀರಿ. ಈ ಸಮಯವನ್ನು ನಿಮ್ಮ ಮಿತ್ರರ ಜೊತೆ ಕಳೆಯಬಹುದಿತ್ತು ಎಂದು ಪೀಠ ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವ ವೇಳೆ ಪಾಲಿಸಬೇಕಾದ ನಿಯಮವನ್ನು ಪಾಲಿಸಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.
ನಾನು ಪೀಠಕ್ಕೆ ಸಹಾಯವಾಗಲಿ ಎಂದು ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದು ರಹಮತುಲ್ಲಾ ಕೊತ್ವಾಲ್ ಪೀಠಕ್ಕೆ ತಿಳಿಸಿದಾಗ ನಮಗೆ ಯಾವುದೇ ಸಹಾಯದ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.