-->

ಕನ್ನಡ ವೀಕ್ಷಕರಿಗೆ ಜೀ ಗ್ರೂಪ್‌ ನಿಂದ ಮತ್ತೊಂದು ಕೊಡುಗೆ: ಜ.25ರಿಂದ ಜೀ ಕನ್ನಡ ನ್ಯೂಸ್ ಲಾಂಚ್ Zee Kannada News

ಕನ್ನಡ ವೀಕ್ಷಕರಿಗೆ ಜೀ ಗ್ರೂಪ್‌ ನಿಂದ ಮತ್ತೊಂದು ಕೊಡುಗೆ: ಜ.25ರಿಂದ ಜೀ ಕನ್ನಡ ನ್ಯೂಸ್ ಲಾಂಚ್ Zee Kannada News


ಬೆಂಗಳೂರು: ಜೀ ಗ್ರೂಪ್‌ನಿಂದ ದಕ್ಷಿಣ ಭಾರತಕ್ಕೆ  ಭರ್ಜರಿ ಕೊಡುಗೆ ಲಭ್ಯವಾಗಿದ್ದು, ಏಕಕಾಲದಲ್ಲಿ 4 ಡಿಜಿಟಲ್‌ ಪ್ರಾದೇಶಿಕ ನ್ಯೂಸ್‌ ಚಾನೆಲ್‌ ಗಳು ಕಾರ್ಯಾರಂಭಗೊಂಡಿದೆ.

ಭಾರತದ ಬೃಹತ್ ನ್ಯೂಸ್‌ ನೆಟ್‌ವರ್ಕ್‌ಗಳಲ್ಲಿ ಒಂದಾಗಿರುವ ಜೀ ಗ್ರೂಪ್‌ ದಕ್ಷಿಣ ಭಾರತದ ಪ್ರಾದೇಶಿಕ ಸುದ್ದಿಗಳಿಗಾಗಿ ಪ್ರತ್ಯೇಕವಾಗಿ 4ಡಿಜಿಟಲ್ ಸುದ್ದಿ ವಾಹಿನಿಗಳನ್ನು ಜನವರಿ 25 ರಂದು ಲಾಂಚ್‌ ಮಾಡಿದೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿಯವರು ಚ್ಯಾನಲ್ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ. ಈ ಮೂಲಕ ಜೀ ಕನ್ನಡ ನ್ಯೂಸ್‌, ಜೀ ತಮಿಳು ನ್ಯೂಸ್, ಜೀ ಮಲಯಾಳಂ ನ್ಯೂಸ್, ಜೀ ತೆಲುಗು ನ್ಯೂಸ್ ಹೀಗೆ ನಾಲ್ಕು ಭಾಷೆಗಳಲ್ಲಿ ಜೀ ಗ್ರೂಪ್ ವೀಕ್ಷಕರನ್ನು ತಲುಪಲಿದೆ. ಈ ಡಿಜಿಟಲ್‌ ನ್ಯೂಸ್‌ ಮೂಲಕ ಜೀ ಗ್ರೂಪ್‌ ಬುದ್ಧಿವಂತ ಯುವ ವೀಕ್ಷಕರ ಅಗತ್ಯಗಳನ್ನು ಪೂರೈಸುತ್ತಿದೆ. ಸುದ್ದಿಯ ಗುಣಮಟ್ಟದ ಬಗ್ಗೆ ವಿಶ್ವಾಸ ಹಾಗೂ ಭರವಸೆಯನ್ನು ಸಂಸ್ಥೆ ಹೊಂದಿದೆ.

ದೇಶದ ಇತರಡೆಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಇಂಟರ್‌ನೆಟ್‌ ಬಳಕೆದಾರರು ಅಧಿಕವಾಗಿದ್ದಾರೆ. 2018 ರಿಂದ 20ರ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆ 60 ರಿಂದ 70 ಶೇ. ಏರಿಕೆಯಾಗಿದೆ. ಶೇ.85ರಷ್ಟು ಪ್ರಾದೇಶಿಕ ಭಾಷೆಯ ಜನ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೀಕ್ಷಣೆ ಮಾಡುತ್ತಿದ್ದಾರೆ.  ಶೇಕಡಾ 68 ರಷ್ಟು ವೀಕ್ಷಕರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುದ್ದಿ ತಿಳಿಯುತ್ತಿದಾರೆ. ಜೀ ನ್ಯೂಸ್‌ ಯಾವುದೇ ರಾಜಕೀಯ ಪ್ರಭಾವವಿಲ್ಲದೆ, ಪಕ್ಷಪಾತವಿಲ್ಲದೆ, ನೈಜ ಸುದ್ದಿಯನ್ನು ವೀಕ್ಷಕರಿಗೆ ತಲುಪಿಸುತ್ತಿದೆ. 

ಜೀ ಕನ್ನಡ ನ್ಯೂಸ್‌ ವೃತ್ತಿಪರ ಪತ್ರಕರ್ತರ ಪಡೆಯನ್ನು ಹೊಂದಿದೆ. 24*7 ಮಾದರಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ಸದಾ ತಾಜಾ ಸುದ್ದಿಯೊಂದಿಗೆ ವೀಕ್ಷಕರ ಮನ ಗೆಲ್ಲುತಿದೆ. ಹೈಟೆಕ್‌ ಟೆಕ್ನಾಲಜಿಯ ಜೊತೆಗೆ ದಕ್ಷತೆಯ ಸಿಬ್ಬಂದಿಯೊಂದಿಗೆ ಜೀ ಕನ್ನಡ ನ್ಯೂಸ್‌ ಸತ್ಯವೇ ಸುದ್ದಿಯ ಜೀವಾಳ ಅನ್ನೋ ಟ್ಯಾಗ್‌ ಲೈನ್‌ ಅಡಿ ಸುದ್ದಿಯನ್ನು ವೀಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಜೀ ಕನ್ನಡ ನ್ಯೂಸ್ ಇಡೀ ರಾಜ್ಯದ ಸಮಗ್ರ ಸುದ್ದಿಗಳನ್ನು ಟಾಪ್‌ 100 ನ್ಯೂಸ್‌ ನಲ್ಲಿ ನೀಡತ್ತದೆ. 

ರಾಜಕೀಯ ಮುಖಂಡರ ವಾಕ್ಝರಿ ನೋಡಲು ಮುಖಾಮುಖಿ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಆ ದಿನದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿರುವಂತಹ ಸುದ್ದಿಯನ್ನು ವೈರಲ್‌ ಸುದ್ದಿ ಅನ್ನೋ ಅಡಿಬರಹದಲ್ಲಿ ವೀಕ್ಷಕರನ್ನು ತಲುಪುತ್ತದೆ. ಸಿನಿ ಪ್ರಿಯರಿಗಾಗಿ ಚಿತ್ರಮಂಜರಿ ಹಾಗೂ ಫ್ಯಾಷನ್‌ ಪ್ರಿಯರು ಹಾಗೂ ಆರೋಗ್ಯದ ವಿಚಾರವಾಗಿ ಚಿತ್ತಾರ ಅನ್ನೋ ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಜನರನ್ನ ಜೀ ಕನ್ನಡ ನ್ಯೂಸ್‌ ತಲುಪುತ್ತಿದೆ.


ನಿಮ್ಮ ಜೀ ಕನ್ನಡ ನ್ಯೂಸ್‌ ನೋಡಬೇಕಾದಲ್ಲಿ ಕೆಳಗಿನ ಲಿಂಕ್‌ ಗಳನ್ನು ಫಾಲೋ ಮಾಡಿ ಹಾಗೂ ಸಬ್‌ ಸ್ಕ್ರೈಬ್‌ ಮಾಡಿಕೊಳ್ಳಿ.

Youtube

Facebook

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99