
ನೀವು ಹೊರ ರಾಜ್ಯದವರಾ? ಹಾಗಾದರೆ ಕರ್ನಾಟಕ್ಕೆ ಬರುವಾಗ ಗಮನಿಸಿ: ರಾಜ್ಯಸರಕಾರ ಹೊರಡಿಸಿದೆ ಹೊಸ ಸುತ್ತೋಲೆ
Thursday, February 17, 2022
ಬೆಂಗಳೂರು: ಕೋವಿಡ್‌ನ ಬದಲಾದ ಸನ್ನಿವೇಶದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಕೇರಳ ಹಾಗೂ ಗೋವಾದಿಂದ ಕರ್ನಾಟಕಕ್ಕೆ ಆಗಮಿಸುವವರು ಇನ್ನು RT-PCR ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಬೇಕಾಗಿಲ್ಲ.
ಆದರೆ ಎರಡು ಡೋಸ್ ವ್ಯಾಕ್ಸಿನೇಷನ್ ನ ಸರ್ಟಿಫಿಕೇಟ್ ಮಾತ್ರ ಕಡ್ಡಾಯವಾಗಿ ಇರತಕ್ಕದ್ದು ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.
ಹೊಸ ಆದೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ಇರುವ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ