ಹಿಜಾಬ್ ವಿವಾದ-ಅಶಾಂತಿ ಸೃಷ್ಟಿಸದಂತೆ ಉಡುಪಿಯಲ್ಲಿ ಶಾಂತಿ ಸಭೆ, CFI ಗೈರು!
Sunday, February 13, 2022
ನಾಳೆ ಶಾಲೆಗಳು ಹಾಗೂ ಗುರುವಾರದಿಂದ ಕಾಲೇಜುಗಳು ಆರಂಭವಾಗುವ ಹಿನ್ನಲೆಯಲ್ಲಿ ಮತ್ತೆ ಅಶಾಂತಿ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಉಡುಪಿಯಲ್ಲಿ ಶಾಂತಿ ಸಭೆ ನಡೆಯಿತು.
ಉಡುಪಿ ತಾಲೂಕು ಕಛೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಶಾಂತಿ ಸಭೆಯಲ್ಲಿ, ಎಲ್ಲಾ ಪಕ್ಷ, ಧರ್ಮ ದ ಮುಖಂಡರು, ಉಡುಪಿ ಶಾಸಕ ರಘುಪತಿ ಭಟ್,ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಡಿವೈಎಸ್ಪಿ ಸುಧಾಕರ್,ಕಾಂಗ್ರೆಸ್, ಬಿಜೆಪಿ ಮುಖಂಡರು,ಹಿಂದೂ ಜಾಗರಣ ವೇದಿಕೆ,ಜಿಲ್ಲಾ ಮುಸ್ಲಿಂ ಒಕ್ಕೂಟ,ಎಸ್ ಡಿ ಪಿ ಐ,ಕ್ರೈಸ್ತ ಧರ್ಮಗುರುಗಳು,ಉಡುಪಿ ಕೃಷ್ಣಮಠದ ಪ್ರತಿನಿಧಿಗಳು,ಎಬಿವಿಪಿ ಮುಖಂಡರು ಸೇರಿದಂತೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಆದರೆ ಸಿಎಫ್ಐ ಮಾತ್ರ ಶಾಂತಿ ಸಭೆಗೆ ಗೈರಾಗಿದೆ.. ಸಭೆಯ ಬಳಿಕ ಮಾತನಾಡಿದ, ಶಾಸಕ ರಘಪತಿ ಭಟ್, ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು ಅಂತ ಮನವಿ ಮಾಡಿದ್ದೇವೆ, ಸಭೆಯಲ್ಲಿ ಇದ್ದ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಅಂತ ಹೇಳಿದರು.