Ayurveda ಚಿಕಿತ್ಸೆ ಮೂಲಕ ಕೀನ್ಯಾ ಮಾಜಿ ಪ್ರಧಾನಿ ಮಗಳ ದೃಷ್ಟಿ ವಾಪಸ್: ಪ್ರಧಾನಿ ಮೋದಿ ಜೊತೆ ಸಂತಸ ಹಂಚಿಕೊಳ್ಳುವ ವೇಳೆ ಇಟ್ಟ ಬೇಡಿಕೆ ಏನು ಗೊತ್ತಾ?
Sunday, February 13, 2022
ತಿರುವನಂತಪುರಂ: ದೃಷ್ಟಿ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ಕೇರಳದ ಕೊಚ್ಚಿಯ ಶ್ರೀಧಾರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೀನ್ಯಾದ ಮಾಜಿ ಪ್ರಧಾನ ಮಂತ್ರಿ ರೆಯಿಲಾ ಒಡಿಂಗಾ ಅವರ ಪುತ್ರಿ ರೋಸ್‌ಮೇರಿ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಈ ಸಂತಸವನ್ನು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಹಂಚಿಕೊಂಡಿದ್ದಾರೆ.
ಈ ವೇಳೆ ಕೀನ್ಯಾದ ಮಾಜಿ ಪ್ರಧಾನಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಚಿಕಿತ್ಸಾ ಪದ್ಧತಿಯನ್ನು ಆಫ್ರಿಕಾದಲ್ಲೂ ಪ್ರಾರಂಭಿಸುವ ಇಂಗಿತ ವ್ಯಕ್ತಡಿಸಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ಜೊತೆಯಾಗಿ ಕೆಲಸಮಾಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಕೀನ್ಯಾದ ಮಾಜಿ ಪ್ರಧಾನ ಮಂತ್ರಿ ರೆಯಿಲಾ ಒಡಿಂಗಾ ಅವರ ಪುತ್ರಿ ರೋಸ್‌ಮೇರಿ 2017ರಲ್ಲಿ ಬ್ರ್ಯೈನ್ ಟ್ಯೂಮರ್‌ಗೆ ಒಳಗಾಗಿದ್ದು, ಆ ಬಳಿಕಾ ನೈರೋಬಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಅವರ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಾ ಬಂದಿತ್ತು.
ಈ ನಿಟ್ಟಿನಲ್ಲಿ ಚಿಕಿತ್ಸೆಗಾಗಿ ಹಲವು ದೇಶಕ್ಕೆ ಅಲೆದಾಡಿದರೂ, ಕೊನೇಗೆ 2019 ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಬಂದು ಕೇರಳದ ಕೊಚ್ಚಿಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆದಿದ್ದಿದ್ದರು. ಮೂರು ವಾರಗಳ ಚಿಕಿತ್ಸೆ ಬಳಿಕ ರೋಸ್‌ಮೇರಿ ಊರಿಗೆ ತೆರಳಿದ್ದು, ಈ ವೇಳೆ ವೈದ್ಯರು ಮತ್ತೆ ಚಿಕಿತ್ಸೆ ಮುಂದುವರಿಸಲು ಬರಲು ಹೇಳಿದ್ದರು. ಆದರೆ ಕೋವಿಡ್ ಕಾರಣದಿಂದ ಬರಲಾಗದಿದ್ದು, ಕೊನೆಗೂ ಕಳೆದ ಸೋಮವಾರ ಚಿಕಿತ್ಸೆ ಕೇರಳಕ್ಕೆ ಬಂದು ಚಿಕಿತ್ಸೆ ಮುಂದುವರಿಸಿದ್ದರು.
ಇದೀಗ ನನ್ನ ಮಗಳಿಗೆ ದೃಷ್ಟಿ ಮರಳಿ ಬಂದಿದಿದ್ದು, ಆಕೆ ಎಲ್ಲವನ್ನೂ ನೋಡಬಲ್ಲಳು. ಅವಳಿಗೆ ಸ್ವಯಂ ಕಚೇರಿ ಇದ್ದು, ಅದನ್ನು ನಡೆಸಬಲ್ಲಳು. ಅಲ್ಲದೆ ಡ್ರೈವಿಂಗ್ ಕೂಡಾ ಮಾಡಬಲ್ಲಳು ಎಂದು ಕೀನ್ಯಾ ದ ಮಾಜಿ ಪ್ರಧಾನಿ ರೆಯಿಲಾ ಒಡಿಂಗಾ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.