ಉಡುಪಿಯಲ್ಲಿ ಫೆ.14 ರಿಂದ 144 ಸೆಕ್ಷನ್
Sunday, February 13, 2022
ನಾಳೆಯಿಂದ ಶಾಲೆ ಆರಂಭವಾಗುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ, ಉಡುಪಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ ಜಿಲ್ಲಾಧಿಕಾರಿ ಉಡುಪಿ ಡಿಸಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.
ಫೆ. 14 ರಿಂದ ಫೆಬ್ರವರಿ 19 ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದ್ದು, ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ ಪ್ರತಿಭಟನೆ, ಮೆರವಣಿಗೆ ಪರ ವಿರುದ್ಧ ಘೋಷಣೆ ಕೂಗುವಂತಿಲ್ಲ ಹಾಗೂ ಯಾವುದೇ ವ್ಯಕ್ತಿ ಜಾತಿ ಧರ್ಮಕ್ಕೆ ನೈತಿಕತೆ ವಿರುದ್ಧ ನಡೆದುಕೊಳ್ಳುವಂತಿಲ್ಲ.
ಇನ್ನೂ
ಶಸ್ತ್ರ, ದೊಣ್ಣೆ, ಕತ್ತಿ ಮತ್ತಿತರ ಮಾರಾಕಾಯುದಗಳ ಸಾಗಾಟಕ್ಕೆ ನಿಷೇಧ ಪ್ರತಿಭಟನೆ, ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆಗೆ ನಿಷೇದ ಪ್ರಚೋದನಕಾರಿ ಭಾಷಣ, ಸಂಗೀತ, ಹಾಡು, ಘೋಷಣೆಗಳನ್ನು ಕೂಗುವಂತೆ ಇಲ್ಲ. ಪಟಾಕಿ ಸಿಡಿಸುವಂತಿಲ್ಲ ಅಂತ ಆದೇಶದಲ್ಲಿ ಉಲ್ಲೇಖಿಸಲಾಗಿದೆ.