
Big Breaking: ಮದುವೆ ಮನೆ ಮುಂಭಾಗ ಬಾಂಬ್ ಸ್ಪೋಟ: ಓರ್ವ ಮೃತ್ಯು
ಕಾಸರಗೋಡು: ಮದುವೆಯ ಮನೆಯಲ್ಲಿ ಹಿಂದಿನ ದಿನ ನಡೆದ ವಿವಾದದ ಹಿನ್ನೆಲೆಯಲ್ಲಿ ಗುಂಪೊಂದು ಮದುಮಗನ ಮನೆ ಮುಂಭಾಗ ಮದುವೆ ದಿನ ನಾಡ ಬಾಂಬ್ ಎಸೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಕಣ್ಣೂರು ಜಿಲ್ಲೆಯ ತೋಟ್ಟಡ ಎಂಬಲ್ಲಿ ನಡೆದಿದೆ.
ಇಲ್ಲಿಗೆ ಸಮೀಪದ ಏಚ್ಚೂರು ನಿವಾಸಿ ಜಿಷ್ಣು, ಮೃತಪಟ್ಟ ವ್ಯಕ್ತಿಯಾಗಿದ್ದು, ಮತ್ತಿಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಜಿಷ್ಣು ಬಾಂಬ್ ಎಸೆದ ಗುಂಪಿನಲ್ಲಿ ಇದ್ದ ವ್ಯಕ್ತಿ ಎಂದು ಹೇಳಲಾಗುತ್ತಿದೆ.
ಮದುವೆ ವರನ ಮನೆಯಲ್ಲಿ ಮದುವೆಯ ಮುನ್ನಾದಿನ (ನಿನ್ನೆ) ಗಾನಮೇಳ ಮತ್ತು ಕೆಲ ಸಣ್ಣಪುಟ್ಟ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಕ್ಸಮರ ನಡೆದಿತ್ತು. ಬಳಿಕ ಅದನ್ನು ಮಾತುಕತೆ ಮೂಲಕ ಬಗೆಹರಿಸಲಾಗಿತ್ತು.
ಆದರೆ ಮದುವೆಯ ದಿನ ಮಧ್ಯಾಹ್ನದ ವೇಳೆ ಗುಂಪೊಂದು ಬಾಂಬ್ ಸಮೇತ ಬಂದಿದ್ದು, ಈ ಪೈಕಿ ಬಾಂಬೊಂದು ಮದುಮಗನ ಮನೆ ಮುಂಭಾಗ ಸಿಡಿದಿದ್ದು ಓರ್ವ ಮೃತಪಟ್ಟಿದ್ದಾನೆ.