UDUPI-ರಘುಪತಿ ಭಟ್ಟರಿಗೆ ಜೀವ ಬೆದರಿಕೆ ಕರೆ.!
Sunday, February 13, 2022
ಹಿಜಾಬ್ ಧರಿಸಿ ಪಾಠ ಕೇಳುದಕ್ಕೆ ಅವಕಾಶ ನೀಡಬೇಕು ಅಂತ ಹೋರಾಟ ಮಾಡುವ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ದವಾಗಿ ಆರಂಭದಿಂದಲೂ ಗಟ್ಟಿಯಾಗಿ ನಿಂತಿರುದಕ್ಕೆ ನನಗೆ ಅಂತಾರಾಷ್ಟ್ರೀಯ ಬೆದರಿಕೆ ಕರೆಗಳು ಬರುತ್ತಿದೆ ಅಂತ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ರಘುಪತಿ ಭಟ್, ವಿದೇಶದಲ್ಲಿ ಕುಳಿತುಕೊಂಡು ಕೆಲ ಕಿಡಿಗೇಡಿಗಳು ಇಂಟರ್ನೆಟ್ ಕಾಲ್ ಮೂಲಕ, ನೀನು ಮುಸಲ್ಮಾನರ ವಿರುದ್ಧ ಮೆರೆದಾಡುತ್ತಿದ್ದೀಯಾ, ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಅಂತ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಾನು ವಿಷಯವನ್ನು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ರು, ಕರೆ ಮಾಡಿದ ವ್ಯಕ್ತಿಗಳು ಕೇಳುವ ಮನಸ್ಥಿತಿಯಲ್ಲಿ ಇರೋದಿಲ್ಲ ಅಂತ ಹೇಳಿದ್ದಾರೆ.
ಹೀಗಾಗಿ ಎಸ್ಪಿಯವರು ಗನ್ ಮ್ಯಾನ್ ತೆಗೆದುಕೊಳ್ಳಿ ಎಂದಿದ್ದಾರೆ, ಆದ್ರೆ ನನಗೆ ಗನ್ ಮ್ಯಾನ್ ಭದ್ರತೆ ಅವಶ್ಯಕತೆ ಇಲ್ಲ ಅಂತ ಅನ್ನಿಸುತ್ತಿದೆ. ಯಾಕಂದ್ರೆ ನನಗೆ ನನ್ನ ಕ್ಷೇತ್ರದ ಜನಗಳೇ ಭದ್ರತೆ ನೀಡುತ್ತಿದ್ದಾರೆ, ನನಗೆ ಯಾವ ಭಯವೂ ಇಲ್ಲ ಎಂದಿದ್ದಾರೆ.
ಇನ್ನೂ ಅಂತರಾಷ್ಟ್ರೀಯ ಬೆದರಿಕೆ ಕರೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಶಾಸಕ ರಘುಪತಿ ಭಟ್ ಅವರಿಗೆ ಗನ್ ಮ್ಯಾನ್ ನೀಡಿ ಭದ್ರತೆ ಒದಗಿಸಲಾಗಿದೆ..