ಅಸ್ತವಾಗಿದ್ದ ಶನಿಯ ಮತ್ತೆ ಉದಯ... ತೆರೆಯಲಿದೆ ಈ 4 ರಾಶಿಯವರ ಭಾಗ್ಯದ ಬಾಗಿಲು...
Tuesday, February 15, 2022
ಮೇಷ :
ಶನಿಗ್ರಹದ ಉದಯದಿಂದಾಗಿ ಮೇಷ ರಾಶಿಯವರಿಗೆ ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಇದುವರೆಗೆ ವೃತ್ತಿ ಜೀವನದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಯಶಸ್ಸು ಸಿಗಲು ಪ್ರಾರಂಭಿಸುತ್ತವೆ.
ಮಿಥುನ :
ಶನಿ ಗ್ರಹದ ಉದಯದಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ವೃತ್ತಿಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಪ್ರಶಂಸೆ ಸಿಗಲಿದೆ. ಪ್ರಯಾಣ ಬೆಳೆಸುವ ಅವಕಾಶ ಸಿಗಬಹುದು.
ತುಲಾ :
ಶನಿ ಗ್ರಹದ ಉದಯದಿಂದ ಹೊಸ ಉದ್ಯೋಗಾವಕಾಶಗಳು ಎದುರಾಗಲಿವೆ. ನೀವು ಪ್ರಗತಿಯನ್ನು ಪಡೆಯುತ್ತೀರಿ. ಆದಾಯ ಹೆಚ್ಚಾಗಲಿದೆ. ಸೌಕರ್ಯಗಳು ಹೆಚ್ಚಾಗಲಿವೆ. ಸ್ಥಗಿತಗೊಂಡಿರುವ ಹಳೆಯ ಕೆಲಸಗಳು ಮತ್ತೆ ಆರಂಭವಾಗಲಿವೆ. ಹಳೆಯ ಆಸೆ ನೆರವೇರಲಿದೆ.
ಕುಂಭ :
ಕುಂಭ ರಾಶಿಯವರಿಗೆ ಶನಿ ಗ್ರಹದ ಉದಯವು ಉದ್ಯೋಗದಲ್ಲಿ ಪ್ರಗತಿಯನ್ನು ತರುತ್ತದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ. ಆದಾಯವೂ ಹೆಚ್ಚುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲ ನಿಮ್ಮದಾಗಲಿದೆ. ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು.