ಜಿಲ್ಲಾಧಿಕಾರಿಯ ಕಾರನ್ನೇ ಜಪ್ತಿಗೆ ಆದೇಶಿಸಿದ ಕೋರ್ಟ್: ಯಾಕೆ ಗೊತ್ತಾ?
Tuesday, February 15, 2022
ಕಲ್ಬುರ್ಗಿ: ಏತ ನಿರಾವರಿ ಯೋಜನೆಯಲ್ಲಿ ಮುಳುಗಡೆಯಾದ ಜಮೀನಿಗೆ ಪರಿಹಾರ ನೀಡಲು ಕೋರ್ಟ್ ಆದೇಶ ನೀಡಿದರೂ, ಚಿಕ್ಕಾಸನ್ನೂ ನೀಡದ ಜಿಲ್ಲಾಧಿಕಾರಿಯ ಕಾರನ್ನೇ ಜಪ್ತಿಗೆ ಕೋರ್ಟ್ ಆದೇಶಿಸಿದ ಭಿನ್ನ ಘಟನೆ ಕಲ್ಬುರ್ಗಿ ಯಲ್ಲಿ ನಡೆದಿದೆ.
ಕಲಬುರಗಿಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆಯ ಎಂಬವರ ಸುಮಾರು 33 ಗುಂಟೆ ಜಮೀನು
2008ರಲ್ಲಿ ಭೀಮಾ ಏತ ನಿರಾವರಿ ಯೋಜನೆಯಲ್ಲಿ ಮುಳುಗಡೆಯಾಗಿತ್ತು.
ಮುಳುಗಡೆಯಾದ ಜಮೀನಿಗೆ 7.39.632 ಪರಿಹಾರ ನೀಡವಂತೆ ಕೋರ್ಟ್ ಆದೇಶ ಮಾಡಿತ್ತು. ಕೋರ್ಟ್ ಆದೇಶ ಆದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಾರು ಜಪ್ತಿಗೆ ಕಲಬುರಗಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಸಿದೆ.
ಕೂಡಲೇ ಎಚ್ಚೆತ್ತ ಭೂಸ್ವಾಧೀನ ಇಲಾಖೆ ಅಧಿಕಾರಿಗಳು ವಕೀಲರೊಂದಿಗೆ ಮತ್ತು ಕಲ್ಲಪ್ಪ ಜೊತೆ ಸಂಧಾನ ನಡೆಸಿ ಚೆಕ್ ಕೋರ್ಟ್ ನೀಡುವುದಾಗಿ ಹೇಳಿದ್ದಾರೆ. ಬಳಿಕ ಕಲ್ಲಪ್ಪ ಅಧಿಕಾರಿಗಳಿಗೆ ಹಣ ಪಾವತಿಸುವಂತೆ ಕಾಲಾವಕಾಶ ನೀಡಿದ್ದಾರೆ.