
ಟೆಂಪೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು
Monday, January 3, 2022
ಹೊನ್ನಾವರ : ಟೆಂಪೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಪ್ರಿನ್ಸಿಟಾ ಪ್ರಾನ್ಸಿಸ್ ಮಿರಾಂಡ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಇಡಗುಂಜಿ ನಗರಬಸ್ತಿಕೇರಿ ರಸ್ತೆಯ ಮೂಲಕ ಸಂಶಿಯ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಟೆಂಪೋವನ್ನು ಚಲಾಯಿಸಿಕೊಂಡು ಬಂದ ವೇಳೆ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಪಿಯದಾದ ಲೋಪಿಸ್, ರೇಕಲ್ ಮಿರಾಂಡ, ಕೇರಾ ಮಿರಾಂಡ, ರೇಖಾ ಮಾರಿಯೋ ಮಿರಾಂಡ, ಲೆನ್ಸಿಟಾ ಮಿರಾಂಡ, ಪಿಲೋಮಿನಾ ಮಿರಾಂಡ ಎಂಬವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.