
ಮಂಗಳೂರಿನಲ್ಲಿ ಮತ್ತೊಮ್ಮೆ NIA ದಾಳಿ- ಅವಳ ಮೇಲೆ ಇದೆ ಡೌಟು!
Monday, January 3, 2022
ಮಂಗಳೂರು; ಮಂಗಳೂರಿನಲ್ಲಿ ಮಾಜಿ ಶಾಸಕ ಬಿ ಎಂ ಇದಿನಬ್ಬ ಅವರ ಮಗ ಬಿ ಎಂ ಬಾಷಾ ಮನೆಗೆ ಮತ್ತೊಮ್ಮೆ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ ಆಗಷ್ಟ್ ತಿಂಗಳಲ್ಲಿ ಎನ್ ಐ ಎ ಅಧಿಕಾರಿಗಳು ಇದೇ ಮನೆಗೆ ದಾಳಿ ನಡೆಸಿ ಐಸಿಸ್ ಟೆರರಿಸ್ಟ್ ಗಳ ಜೊತೆಗೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಬಿ ಎಂ ಇದಿನಬ್ಬಅವರ ಮೊಮ್ಮಗನನ್ನು ಬಂಧಿಸಿದ್ದರು. ಇದೀಗ ಎರಡನೇ ಬಾರಿ ದಾಳಿ ನಡೆಸಿದ್ದಾರೆ.
ಆಕೆಯ ಮೇಲೆ ಡೌಟು!
ಬಿ ಎಂ ಬಾಷಾ ಅವರ ಪುತ್ರ ಪತ್ನಿಯ ಮೇಲೆ ಇರುವ ಸಂಶಯದಿಂದ ಈ ದಾಳಿ ಆಗಿದೆ. ದೀಪ್ತಿ ಮರಿಯಂ ಮೇಲೆ ಎನ್ ಐ ಎ ಅಧಿಕಾರಿಗಳಿಗೆ ಸಂಶಯವಿದ್ದು ಈ ಹಿನ್ನೆಲೆಯಲ್ಲಿ ಇಂದು ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ದೀಪ್ತಿ ಮರಿಯಂ ಮೂಲತ ಹಿಂದೂವಾಗಿದ್ದುಈತ ನನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದಳು. ಇದೀಗ ಈಕೆಯ ಮೇಲೆ ಸಂಶಯಪಟ್ಟು ಎನ್‌ಐ ಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.