
ಐಸಿಸ್ ಸಂಪರ್ಕ- ಮಂಗಳೂರಿನಲ್ಲಿ ಬಿ ಎಂ ಇದಿನಬ್ಬ ಮೊಮ್ಮಗನ ಪತ್ನಿ AREST
Monday, January 3, 2022
ಮಂಗಳೂರು; ಐಸಿಸ್ ಸಂಪರ್ಕದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿ ಎಂ ಇದಿನಬ್ಬ ಅವರ ಮೊಮ್ಮಗನ ಪತ್ನಿಯನ್ನು ಎನ್‌ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.
ಐಸಿಸ್ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಕಳೆದ ಆಗಷ್ಟ್ ನಲ್ಲಿ ಇದೇ ಮನೆಯಿಂದ ಬಿ ಎಂ ಇದಿನಬ್ಬ ಅವರ ಮೊಮ್ಮಗ ನನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದರು. ಮೊಮ್ಮಗ ಅನಾಸ್ ಅಬ್ದುಲ್ ರಹಮಾನ್ ನಪತ್ನಿ ದೀಪ್ತಿ ಮಾರ್ಲ ಯಾನೆ ಮರಿಯಮ್ಮಳನ್ನು ಅಂದೇ ಸಂಶಯದಿಂದ ವಿಚಾರಣೆ ನಡೆಸಲಾಗಿತ್ತು.ಆದರೆ ಬಂಧನವಾಗಿರಲಿಲ್ಲ. ಆಕೆಯ ಕಾರ್ಯ ಚಟುವಟಿಕೆ ಬಗ್ಗೆ ಕಣ್ಣಿಟ್ಟಿದ್ದ ಎನ್ ಐ ಎ ಅಧಿಕಾರಿಗಳು ಇಂದು ಆಕೆಯನ್ನು ಬಂಧಿಸಿದ್ದಾರೆ. ಆಕೆಗೆ ಇರುವ ಐಸಿಸ್ ಸಂಪರ್ಕದ ಬಗ್ಗೆ ತನಿಖೆ ಮುಂದುವರಿದಿದೆ.
ಈಕೆ ಮೂಲತ ಹಿಂದುವಾಗಿದ್ದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಳು. ಕಾಲೇಜಿನಲ್ಲಿ ಬಿ ಎಂ ಇದಿನಬ್ಬ ಅವರ ಮೊಮ್ಮಗ ಅನಾಸ್ ನನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಆತನನ್ನು ಮದುವೆಯಾಗಿದ್ದಳು.