-->

ನಾನು ಮೊದಲು ಜಾಕ್ವೆಲಿನ್ (Jacqueline fernandez) ಜತೆ ಸಂಬಂಧ ಹೊಂದಿದ್ದು ನಿಜ - ಹೀಗಂತ ಹೇಳಿದ್ದಾನೆ ಆತ!

ನಾನು ಮೊದಲು ಜಾಕ್ವೆಲಿನ್ (Jacqueline fernandez) ಜತೆ ಸಂಬಂಧ ಹೊಂದಿದ್ದು ನಿಜ - ಹೀಗಂತ ಹೇಳಿದ್ದಾನೆ ಆತ!

ಹೊಸದಿಲ್ಲಿ : ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಸಿಲುಕಿರುವ ಆರೋಪಿ ಸುಖೇಶ್ ಚಂದ್ರಶೇಖರ್ ಕೊನೆಗೂ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline fernandez)ಜತೆ ಸಂಬಂಧ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ . 



ಆದರೆ  200 ಕೋಟಿ ರೂ . ವಂಚನೆಯಲ್ಲಿ ನಟಿಯ ಪಾತ್ರವಿಲ್ಲ ಎಂದು ಹೇಳಿದ್ದಾರೆ . ಸುಖೇಶ್ ಪರ ವಕೀಲ ಅನಂತ್ ಮಲಿಕ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು , ನಾನು ಮೊದಲು ಜಾಕ್ವೆಲಿನ್ ಫರ್ನಾಂಡಿಸ್ (Jacqueline fernandez)
 ಜತೆ ಸಂಬಂಧ ಹೊಂದಿದ್ದು ನಿಜ . ಆದರೆ ಇದು ವೈಯಕ್ತಿಕ ವಿಚಾರ . ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಯ ಪಾತ್ರವಿಲ್ಲ ” ಎಂದು ಸುಖೇಶ್ ಸ್ಪಷ್ಟಪಡಿಸಿದ್ದಾರೆ .


ಸುಖೇಶ್ ಹಾಗೂ ಜಾಕ್ವೆಲಿನ್ (Jacqueline fernandez)
 ಆತ್ಮೀಯವಾಗಿರುವ ಫೋಟೊಗಳು ಬಹಿರಂಗಗೊಳ್ಳುತ್ತಲೇ ಇಬ್ಬರ ನಡುವೆ ಸಂಬಂಧವಿದೆ ಎಂಬ ಮಾತುಗಳು ಕೇಳಿ ಬಂದಿದ್ದವು . 

ಅಲ್ಲದೆ , ಸುಖೇಶ್ ಅವರು ಜಾಕ್ವೆಲಿನ್‌ಗೆ ಕೋಟ್ಯಂತರ ರೂ . ಮೌಲ್ಯದ ವಸ್ತುಗಳನ್ನು ಉಡುಗೊರೆ ನೀಡಿದ್ದರು ಎಂಬುದು ಸಹ ಚರ್ಚೆಯಾಗಿತ್ತು . ಹಾಗಾಗಿಯೇ , ಜಾಕ್ವೆಲಿನ್ ಅವರು ವಿದೇಶಕ್ಕೆ ತೆರಳದಂತೆ ಸೂಚಿಸಲಾಗಿದೆ . ಇದರ  ಬೆನ್ನಲ್ಲೇ ಈಗ ಸುಖೇಶ್ ತಮ್ಮ ಸಂಬಂಧದ ಕುರಿತು ತಿಳಿಸಿದ್ದಾರೆ . ಅಲ್ಲದೆ ,ಪ್ರಕರಣದಲ್ಲಿ ನಾನಿನ್ನೂ ಆರೋಪಿಯಾಗಿದ್ದೇನೆಯೇ ಹೊರತು , ಅಪರಾಧಿ ಅಲ್ಲ . ಹಾಗಾಗಿ , ಈಗಲೇ ವಂಚಕ ಎಂದು ಕರೆಯು ವುದು ಸರಿಯಲ್ಲ  ಎಂಬುದಾಗಿಯೂ ತಿಳಿಸಿದ್ದಾರೆ .


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99