-->

ಇಬ್ಬರು ಕಾಲೇಜು ಯುವತಿಯರ ಮೇಲೆ ಬಾಲಕರ ಅತ್ಯಾಚಾರ!

ಇಬ್ಬರು ಕಾಲೇಜು ಯುವತಿಯರ ಮೇಲೆ ಬಾಲಕರ ಅತ್ಯಾಚಾರ!

ಹೊಸಕೋಟೆ : ಕಾಲೇಜಿಗೆ ಹೋದ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರನ್ನು ತಮ್ಮ ಪರಿಚಿತರೊಬ್ಬರ ಮನೆಗೆ ಕರೆದೊಯ್ದು ಅಲ್ಲೇ ಉಳಿಸಿಕೊಂಡು ಅತ್ಯಾಚಾರ ಎಸಗಿದ್ದ ಇಬ್ಬರು ಬಾಲಕರನ್ನು  ಪೊಲೀಸರು ಬಂಧಿಸಿದ್ದಾರೆ.

ಬಾಲಕರಿಬ್ಬರ ವಿರುದ್ಧ pocso ಕಾಯಿದೆಯಡಿ ಪ್ರಕರಣ ದಾಖಲಿಸ ಲಾಗಿದೆ . ಬಾಲಕರನ್ನು ಕೋರ್ಟ್‌ಗೆ ಹಾಜರುಪಡಿಸಿ ಬಾಲ ಮಂದಿರಕ್ಕೆ ಬಿಡಲಾಗಿದೆ . ತಾಲೂಕಿನ ಗ್ರಾಮ ಬಾಲಕಿಯರಿಬ್ಬರು ಡಿ .7 ರಂದು ಹೊಸಕೋಟೆ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ವಾಪಸ್ ಬಂದಿರಲಿಲ್ಲ . ಗಾಬರಿಗೊಂಡ ಪೋಷಕರು ಇವರನ್ನು ಪತ್ತೆ ಮಾಡಿಕೊಡಿ ಎರಡು ಬಾಲಕರ ಹೆಸರಿನೊಂದಿಗೆ ಡಿ .8 ರಂದು ಪೊಲೀಸರಿಗೆ ದೂರು ನೀಡಿದ್ದರು . ಈ ದೂರು ಆಧರಿಸಿ ಪ್ರಕರಣ ಕೈಗೆತ್ತಿಕೊಂಡ ಬಳಿಕ ಕೆಲ ದಿನ ಬಿಟ್ಟು ಠಾಣೆಗೆ ಹಾಜರಾದ ಬಾಲಕಿಯರಿಬ್ಬರು , ತಮ್ಮನ್ನು ಹೊಸಕೋಟೆಯಿಂದ ಪರಿಚಿತ ಹುಡುಗ ರಿಬ್ಬರು ಚಿತ್ತೂರಿಗೆ ಕರೆದುಕೊಂಡು ಹೋದರು . ಅಲ್ಲಿ ಉಳಿದುಕೊಂಡಿದ್ದ ವೇಳೆ ನಮ್ಮ ಮೇಲೆ ಅತ್ಯಾಚಾರ ನಡೆಯಿತು ಎಂದು ತಿಳಿಸಿದ್ದಾರೆ .

 ಡಿ .15 ರಂದೇ 17 ವರ್ಷದ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದು ಬಾಲ  ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ . ನ್ಯಾಯಾಲಯಕ್ಕೆ ಮನವಿ ಮಾಡಿ ಮತ್ತೆ ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ ಬಾಲಕಿಯರ ಹೇಳಿಕೆಯಂತೆ ನಾವು ಚಿತ್ತೂರಿಗೆ ಹೋಗಿಲ್ಲ . ಕೆಜಿಎಫ್‌ ಹೋಗಿದ್ದು ಅಲ್ಲೇ ಪರಿಚಿತರೊಬ್ಬರ ಮನೆಯಲ್ಲಿ ಉಳಿದುಕೊಂಡೆವು . ಈ ವೇಳೆ ಬಾಲಕಿಯರ ಮೇಲೆ  ಅತ್ಯಾಚಾರ ನಡೆಸಿದೆವು ಎಂದು ಹೇಳಿದ್ದಾರೆ.  ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಬಾಲ ಮಂದಿರಕ್ಕೆ ಬಿಟ್ಟಿದ್ದಾರೆ . 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99