-->

ಬ್ಯಾಂಕ್ ಲಾಕರ್ ನಲ್ಲಿ 500 ಕೋಟಿ ರೂ ಮೌಲ್ಯದ ಶಿವಲಿಂಗ!

ಬ್ಯಾಂಕ್ ಲಾಕರ್ ನಲ್ಲಿ 500 ಕೋಟಿ ರೂ ಮೌಲ್ಯದ ಶಿವಲಿಂಗ!

ತಮಿಳುನಾಡಿನ ತಂಜಾ ವೂರ್‌ನಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್ ನಲ್ಲಿದ್ದ 500 ಕೋಟಿ ರೂ . ಮೌಲ್ಯದ  ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ . 

ಇದು ಪಚ್ಚೆ ಮತ್ತು ಹರಳುಯುಕ್ತ ಶಿವಲಿಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಎಸ್.ಅರುಣ ಭಾಸ್ಕರ ಎಂಬಾತನನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ . ನಗರದ ಮನೆಯೊಂದರಲ್ಲಿ ದೇಗುಲ ಗಳಲ್ಲಿನ ಹಳೆಯ ವಿಗ್ರಹಗಳ ಮಾರಾಟದ ಜಾಲ ನಡೆಯುತ್ತಿದೆ ಎಂಬ ಬಗ್ಗೆ ಸುಳಿವು ಪಡೆದ ಪೊಲೀಸರು ಅದರ ಆಧಾರದ ಮೇಲೆ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪೊಲೀಸ್ ಆರ್.ರಾಜಾರಾಮ್ ಮತ್ತು ಇತರ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಈ ಸಂದರ್ಭದಲ್ಲಿ ಅರುಣ ಭಾಸ್ಕರ ತನ್ನ ತಂದೆ ಎನ್.ಎ.ಸಾಮಿಯಪ್ಪನ್ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ರೂ . ಮೌಲ್ಯದ ಶಿವಲಿಂಗ ಇರುವ ಬಗ್ಗೆ ಮಾಹಿತಿ ನೀಡಿದ್ದ . ಅದರ ಬಗ್ಗೆ ಯಾವುದೇ ದಾಖಲೆಗಳು ಇಲ್ಲದೇ ಇದ್ದು ಈ ಹಿನ್ನೆಲೆಯಲ್ಲಿ  ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ . ಶಿವಲಿಂಗ 8 ಸೆಂಟಿ ಮೀಟರ್ ಉದ್ದ 500 ಗ್ರಾಮ್ ಭಾರ ಇದೆ . ತಿರುವರೂರ್‌ ಜಿಲ್ಲೆಯಲ್ಲಿರುವ ತಿರುಕ್ಕುವ ಎಂಬಲ್ಲಿರುವ ದೇವಸ್ಥಾನದಿಂದ ಈ ಶಿವಲಿಂಗ ಕಳವಾಗಿತ್ತು . ಪೊಲೀಸರು ದಾಖಲಿಸಿರುವ  FIR ಪ್ರಕಾರ ಪತ್ತೆಯಾಗಿರುವ ಶಿವಲಿಂಗ ಆ ದೇಗುಲದ್ದೇ  ಎಂದು ಹೇಳಲಾಗುತ್ತಿದೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99