-->

ಅಕ್ರಮ ಸಂಬಂಧ ಸಾಕು ಎಂಬ ಪ್ರಿಯತಮೆಯನ್ನು ಕೊಂದ ಪ್ರಿಯಕರನಿಗೆ ಶಿಕ್ಷೆ

ಅಕ್ರಮ ಸಂಬಂಧ ಸಾಕು ಎಂಬ ಪ್ರಿಯತಮೆಯನ್ನು ಕೊಂದ ಪ್ರಿಯಕರನಿಗೆ ಶಿಕ್ಷೆ

ಹಾಸನ : ಅಕ್ರಮ ಸಂಬಂಧ ಸಾಕು ಎಂದ ಪ್ರೇಯಸಿಯನ್ನು ಮುಳ್ಳಯ್ಯನಗಿರಿಗೆ ಕರೆದೊಯ್ದು  ಕೊಲೆ  ಮಾಡಿದ್ದ ಪ್ರಿಯಕರನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ . ದಂಡ ವಿಧಿಸಿದೆ .

 ಅರಸೀಕೆರೆ ತಾಲೂಕು ಗುಂಡ್ಯಾನಹಳ್ಳಿಯ ರಾಜಶೇಖರ ಕೊಲೆ ಮಾಡಿ ಸಿಕ್ಕಿ ಬಿದ್ದು ಈಗ ಜೈಲು ಪಾಲಾಗಿರುವ ವ್ಯಕ್ತಿ . ಈತ ಲತಾಮಣಿ ಎಂಬಾಕೆಯನ್ನು 2014 ರ ಜುಲೈ 23 ರಂದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಕೊಲೆ ಮಾಡಿ ಆಕೆಯ ಬಳಿಯಿದ್ದ ವಸ್ತುಗಳನ್ನು ದೋಚಿದ್ದ .

 2008-09ರಿಂದಲೂ ಲತಾಮಣಿ ಹಾಗೂ ರಾಜಶೇಖರ ಪರಸ್ಪರ ಪ್ರೀತಿಸುತ್ತಿದ್ದರು . ಆದರೆ , ಕುಟುಂಬದವರು ಒಪ್ಪದ ಕಾರಣದಿಂದ ಲತಾ , ರಾಜಶೇಖರನನ್ನು ವಿವಾಹವಾಗಿರಲಿಲ್ಲ . ಆದ್ದರಿಂದ ಬೇರೊಬ್ಬರನ್ನು ವಿವಾಹವಾಗಿದ್ದ ಆತ ಪ್ರೇಯಸಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ .

 ಆದರೆ 2014 ರ ಜೂನ್‌ನಲ್ಲಿ ಆಕೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾದ ಹಿನ್ನೆಲೆಯಲ್ಲಿ ಲತಾಮಣಿ  ಆತನ ಜೊತೆಗೆ ಸಂಬಂಧ ಕಡಿದುಕೊಂಡಿದ್ದಳು . ಆತನ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ . ಇದರಿಂದ ಕೋಪಗೊಂಡಿದ್ದ ಆತ ಆಕೆಯನ್ನು ಕೊಲೆ ಮಾಡಿ ತಲೆ ತಪ್ಪಿಸಿಕೊಂಡಿದ್ದ . ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99