ದಕ್ಷಿಣ ಕನ್ನಡದಲ್ಲಿ ವ್ಯಕ್ತಿಯ ಕೊಲೆ!
Thursday, January 13, 2022
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೆಖ್ಯ ಸಮೀಪದ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ದೇವಸ್ಯ ನಿವಾಸಿ ಶಾಂತಪ್ಪ ಗೌಡ (40 ವ) ಹತ್ಯೆಯಾದವರು. Lic ಪ್ರತಿನಿಧಿಯಾಗಿರುವ ಇವರು ಕೃಷಿಕರು ಕೂಡ ಆಗಿದ್ದಾರೆ. ಇವರನ್ನು ಕೊಲೆಗೈದಿರುವ ಘಟನೆ ಗುರುವಾರ (ಜ.13) ದಂದು ಬೆಳಿಗ್ಗೆ 10 ಗಂಟೆಗೆ ನಡೆದಿದೆ.
ಜಮೀನು ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ