VOTE: ಐದೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಸ್ಥಗಿತ- ಇದು ಕಾಂಗ್ರೆಸ್ ಹೋರಾಟಕ್ಕೆ ಹಿನ್ನಡೆಯೆ?
ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪಾದಯಾತ್ರೆಯನ್ನು ಐದೆ ದಿನಕ್ಕೆ ಮೊಟಕುಗೊಳಿಸಲಾಗಿದೆ
ಐದು ದಿನಗಳ ಹಿಂದೆ ಆರಂಭವಾದ ಪಾದಯಾತ್ರೆಯಿಂದ ಕಾಂಗ್ರೆಸ್ ನಾಯಕರು ಹಿಂದೆ ಸರಿದಿದ್ದು ಕೇವಲ 5 ದಿನಕ್ಕೆ ಪಾದಯಾತ್ರೆ ಕೊನೆಯಾಗಿದೆ. KPCC ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ CM ಸಿದ್ದರಾಮಯ್ಯ ಅವರು ರಾಮನಗರ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಮಹತ್ವ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ
ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಪಾದಯಾತ್ರೆಯನ್ನು ಸದ್ಯಕ್ಕೆ ಕೈ ಬಿಟ್ಟಿದ್ದೇವೆ ಅಷ್ಟೇ, ಮುಂದಿನ ದಿನಗಳಲ್ಲಿ ಮೇಕೆದಾಟು ಪಾದಯಾತ್ರೆ ಮಾಡಿಯೆ ಮಾಡುತ್ತೇವೆ. ರಾಮನಗರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುತ್ತೇವೆ. ಸರಕಾರದ ಬೆದರಿಕೆಗೆ ಪಾದಯಾತ್ರೆಯನ್ನು ವಾಪಸ್ ಪಡೆಯುತ್ತಿಲ್ಲ. ನಮಗೆ ರಾಜ್ಯದ ಜನರ ಹಿತ ಕೂಡ ಮುಖ್ಯವಾಗಿದ್ದು, ಜನರ ಆರೋಗ್ಯದೃಷ್ಟಿಯಿಂದ ಪಾದಯಾತ್ರೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
KPCC ಅಧ್ಯಕ್ಷ ಡಿಕೆಶಿವಕುಮಾರ್ ಮಾತನಾಡಿ ಜನರ ಹಿತದೃಷ್ಟಿಯಿಂದ ಪಾದಯಾತ್ರೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದು, ಕಾಂಗ್ರೆಸ್ ಗೆ ಮೊದಲು ಜನರ ಆರೋಗ್ಯ ಮುಖ್ಯ. ಬಿಜೆಪಿಗೆ ಹೆದರಿ ಪಾದಯಾತ್ರೆಯನ್ನು ಹಿಂದಕ್ಕೆ ಪಡೆದುಕೊಂಡಿಲ್ಲ. ಕೋವಿಡ್ ಸಂಖ್ಯೆ ಇಳಿಮುಖ ಆಗುತ್ತಿದ್ದಂತೆ ಮತ್ತೆ ಇಲ್ಲಿಂದಲೇ ಪಾದಯಾತ್ರೆ ಆರಂಭಿಸಲಾಗುತ್ತದೆ. ಇದು ಅಂತ್ಯವಲ್ಲ, ಕೇವಲ ತಾತ್ಕಾಲಿಕ ತಡೆ ಅಷ್ಟೇ ಎಂದು ಹೇಳಿದರು.