-->

ಪ್ರೀತಿಸಿ ಮದುವೆಯಾದ ಸೊಸೆಯನ್ನು ಕೊಂದ ಮಾವ!

ಪ್ರೀತಿಸಿ ಮದುವೆಯಾದ ಸೊಸೆಯನ್ನು ಕೊಂದ ಮಾವ!

ತೆಲಂಗಾಣ:  ವ್ಯಕ್ತಿಯೋರ್ವ ತನ್ನ  ಸೊಸೆಯನ್ನೇ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ 
ಘಟನೆ ತೆಲಂಗಾಣದ ಮಂಚೇರಿಯಲ್​​​ನಲ್ಲಿ ನಡೆದಿದೆ.

ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಈಕೆಯೆ ಕಾರಣ ಎಂದು ಈತ ಈ ಕೃತ್ಯವೆಸಗಿದ್ದಾನೆ.


ಲಿಂಗಣ್ಣಪೇಟೆಯ ಸಾಯಿಕೃಷ್ಣ ಎಂಬಾತನು ಸೌಂದರ್ಯ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದನು. ಇವರು ಬೇರೆ ಬೇರೆ ಜಾತಿಯವರಾಗಿದ್ದು ಇವರ ವಿವಾಹಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಆದರೆ, ಕಳೆದ 5  ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ ಕೆಲ ದಿನಗಳ ನಂತರ ಊರಿಗೆ ಬಂದು ಬಾಡಿಗೆ ಮನೆ ಯಲ್ಲಿ ವಾಸ ಮಾಡಿಕೊಂಡಿದ್ದರು.

ಮದುವೆಯಾದ 2 ತಿಂಗಳಲ್ಲೇ ಸಾಯಿಕೃಷ್ಣ ಕುಡಿತದ ಚಟಕ್ಕೊಳಗಾಗಿ ಕೌಟುಂಬಿಕ ಗಲಾಟೆಯಿಂದ ಆತ್ಮಹತ್ಯೆಗೆ ಮಾಡಿದ್ದಾನೆ. 

ಪತಿಯ ನಿಧನದ ಬಳಿಕ ಸೌಂದರ್ಯ ಅದೇ ಗ್ರಾಮದಲ್ಲಿ ವಾಸವಾಗಿದ್ದ ತನ್ನ ತಾಯಿಯ ಮನೆಗೆ ಬಂದಿದ್ದಾಳೆ. ಇಲ್ಲಿಗೆ ಬಂದ  ಸಾಯಿಕೃಷ್ಣನ ತಂದೆ ತನ್ನ ಮಗನ ಸಾವಿಗೆ ಈಕೆಯೆ  ಕಾರಣವೆಂದು ಆರೋಪ ಮಾಡಿ ಸೊಸೆ ಉಳಿದುಕೊಂಡಿದ್ದ ಸ್ಥಳಕ್ಕೆ ಹೋಗಿ ಜಗಳವಾಡಿದ್ದಾನೆ.


ಈ ಸಂದರ್ಭದಲ್ಲಿ ಸೌಂದರ್ಯಳ  ತಂದೆ ಲಕ್ಷ್ಮಯ್ಯ ತಡೆಯಲು ಮುಂದಾದಾಗ, ಆತನಿಗೆ ಗಂಭೀರವಾಗಿ ಹಲ್ಲೆಗೊಳಿಸಿದ್ದಾನೆ. ಇದರ ಬೆನ್ನಲ್ಲೇ ಸೌಂದರ್ಯಳಿಗೆ ಕೊಡಲಿಯಿಂದ ಇರಿದು ಕೊಂದು ಪರಾರಿಯಾಗಿದ್ದಾನೆ.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99