ಸುದ್ದಿಗಳು
ಲೋಡ್ ಆಗುತ್ತಿದೆ...

ಜನಸಂದಣಿಯ‌ ಮೇಲೆ ಚಲಿಸಿದ ಕಾರು- 14 ಮಂದಿ ಸಾವು

 
ಜನಸಂದಣಿಯಲ್ಲಿ ಚಾಲಕ  ಕಾರನ್ನು ಚಲಾಯಿಸಿದ ಪರಿಣಾಮ 14 ಮಂದಿ ಸಾವನ್ನಪ್ಪಿದ ಘಟನೆ ದಕ್ಷಿಣ ತಾಂಜಾನಿಯಾದಲ್ಲಿ ನಡೆದಿದೆ 

ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ  ತಾಂಜಾನಿಯಾ ಅಧ್ಯಕ್ಷೀಯ ಕಚೇರಿ ಮಾಹಿತಿಯನ್ನು ನೀಡಿದೆ.

ಆಗ್ನೇಯ ಮೆಟ್ವಾರಾ ಪ್ರದೇಶದ lidumbe ಗ್ರಾಮದಲ್ಲಿ ಈ ಘಟನೆ ನಡೆದಿದ್ದು  ವೇಗವಾಗಿ ಬರುತ್ತಿದ್ದ ಸ್ಕ್ಯಾನಿಯ ಕಾರು ಜನಸಂದಣಿಯಲ್ಲಿ ಚಲಿಸಿದೆ.  ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಜನಸಂದಣಿಯ ಮೇಲೆ ಹರಿದು ಈ ಘಟನೆ ನಡೆದಿದೆ.

 ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ.ತಾಂಜೇನಿಯಾದ ಅಧ್ಯಕ್ಷ ಸಾಮಿಯಾ ಸುಲುಹು ಹಸನ್ ಅವರು ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುದ್ದಿ ಹಂಚಿಕೊಳ್ಳಿ:
ಇತ್ತೀಚಿನ ಸುದ್ದಿಗಳು
×

WhatsApp Channel

ಬ್ರೇಕಿಂಗ್ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

JOIN NOW