-->
ಆನ್ಲೈನ್ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ  1.13 ಲಕ್ಷ ರೂಪಾಯಿ ಕಳೆದುಕೊಂಡ ಶಿಕ್ಷಕಿ..!!

ಆನ್ಲೈನ್ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂಪಾಯಿ ಕಳೆದುಕೊಂಡ ಶಿಕ್ಷಕಿ..!!

 
ಶಿವಮೊಗ್ಗ: ಆನ್​​ಲೈನ್​ ಮೂಲಕ ಗೋಣಿ ಚೀಲ‌ ಖರೀದಿಸಲು ಹೋಗಿ ಶಿಕ್ಷಕಿಯೊಬ್ಬರು 1.13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 

ಖಾಲಿ ಗೋಣಿಚೀಲ ಖರೀದಿಗಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದಾಗ ಶಿಕ್ಷಕಿಗೆ ಆನ್​ಲೈನ್​ ಟ್ರೇಡಿಂಗ್ ಎಂಬ ವೆಬ್​ಸೈಟ್​ ಸಿಕ್ಕಿದೆ. ಇವರು ಅದಕ್ಕೆ ಇ-ಮೇಲ್  ಮಾಡಿದ್ದು ಆ ಇ-ಮೇಲ್​ಗೆ ಪ್ರತಿಕ್ರಿಯೆ ಬಂದಿತ್ತು. ನಂತರ ಇ ಮೇಲ್ ಸಂದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು  ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ ಶಿಕ್ಷಕಿಯ ವಾಟ್ಸಪ್ ನಂಬರ್ ಪಡೆದಿದ್ದು ಬಳಿಕ ಇಬ್ಬರು ವಾಟ್ಸಪ್ನಲ್ಲಿ ವ್ಯವಹಾರ ನಡೆಸಿದ್ದರು.

26 ಟನ್ ಖಾಲಿ ಚೀಲ ಬೇಕಿದೆ ಎಂದು ಶಿಕ್ಷಕಿ ಹೇಳಿದ್ದಕ್ಕೆ ಆತ, ಖಾಲಿ ಚೀಲಗಳ ಖರೀದಿಗೆ ಅರ್ಧದಷ್ಟು ಹಣವನ್ನು ಮುಂಗಡವಾಗಿ ಕಳುಹಿಸುವಂತೆ ಸೂಚಿಸಿದ್ದ. ಅದರಂತೆ  ಬ್ಯಾಂಕ್ ಖಾತೆಯೊಂದಕ್ಕೆ 1,13,720 ರೂಪಾಯಿ ಆನ್​ಲೈನ್ ಮೂಲಕ ಶಿಕ್ಷಕಿ ಜಮೆ ಮಾಡಿದ್ದರು. ನಂತರ ಆತ ವಾಹನದ ಸಾಗಾಣಿಕೆ ವೆಚ್ಚವಾಗಿ ಮತ್ತಷ್ಟು ಹಣ ಸಂದಾಯ ಮಾಡುವಂತೆ ಸೂಚಿಸಿದ್ದು ಅನುಮಾನಗೊಂಡ ಶಿಕ್ಷಕಿ ಶಿವಮೊಗ್ಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article