ಹುಡುಗಿಗಾಗಿ ಹುಡುಕುತ್ತಿದ್ದವನಿಗೆ ಸಿಕ್ಕಿದ ಬ್ಯೂಟಿ.. ಫಸ್ಟ್ ನೈಟ್ ನಲ್ಲಿ ಎಸ್ಕೇಪ್..!!
Thursday, August 5, 2021
ಭಿಂಡ್ (ಮಧ್ಯಪ್ರದೇಶ) : ಹುಡುಗಿ ಸಿಕ್ತಾ ಇಲ್ಲ ಅಂತ ಕೊರಗ್ತಾ ಇದ್ದ ಯುವಕನಿಗೆ ಕೊನೆಗೂ ಸುಂದರವಾದ ಯುವತಿಯೇ ಸಿಕ್ಕಿ ಆಕೆ ಫಸ್ಟ್ ನೈಟ್ ಅಲ್ಲೇ ಎಸ್ಕೇಪ್ ಆದ ಘಟನೆ ಮಧ್ಯಪ್ರದೇಶದ ಭಿಂಡ್ ಗ್ರಾಮದಲ್ಲಿ ನಡೆದಿದೆ.
ಸೋನು ಜೈನ್ ಎಂಬ ಯುವಕನಿಗೆ ಮದುವೆಯಾಗಲು ಹುಡುಗಿ ಸಿಕ್ಕಿ ಇರಲಿಲ್ಲ.ಕೊನೆಗೆ ಆತನ ಪರಿಚಯದವರಾದ ಉದಲ್ ಖಾತಿಕ್ ಎಂಬುವವರು ನಾನು ಹುಡುಗಿಯನ್ನು ಹುಡುಕಿ ಕೊಡುತ್ತೇನೆ ಆದರೆ ನೀನು ಅವಳಿಗೆ ಒಂದು ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ. ಸೋನು ಇದಕ್ಕೆ ಒಪ್ಪಿಕೊಂಡಿದ್ದಾನೆ. ನಂತರ ಉದಲ್ ಅನಿತಾ ರತ್ನಾಕರ್ ಎಂಬ ಯುವತಿಯನ್ನು ಕರೆತಂದಿದ್ದಾನೆ. ಆಕೆಯನ್ನು ಸೋನು ಮತ್ತು ಆತನ ಮನೆಯವರು ಒಪ್ಪಿಕೊಂಡಿದ್ದಾರೆ.
ನಂತರ ಅವರಿಬ್ಬರಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ. ಫಸ್ಟ್ ನೈಟ್ಗೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತನಗೆ ಸುಸ್ತಾಗುತ್ತಿದೆ ಎಂದು ಅನಿತಾ ಟೆರೇಸ್ ಮೇಲೆ ಹೋಗಿದ್ದಾಳೆ. ಎಷ್ಟು ಹೊತ್ತಾದರೂ ಆಕೆ ಬರದಾಗ ಸೋನು ಭಯವಾಗಿ ಮೇಲೆ ಹೋಗಿ ನೋಡಿದಾಗ ಅಲ್ಲಿ ಆಕೆ ಇರಲಿಲ್ಲ. ನಂತರ ಆತ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಅಷ್ಟರಲ್ಲಿ ಓಡಿಹೋಗುತ್ತಿದ್ದ ಅನಿತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಠಾಣೆಗೆ ಕರೆದುಕೊಂಡು ಬರಲಾಗಿದೆ. ನಂತರ ತಿಳಿದ ವಿಷಯ ಎಂದರೆ, ಹಣಕ್ಕಾಗಿ ಈ ರೀತಿ ಮೋಸ ಮಾಡುವುದು ಎನ್ನುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಐದು ಮಂದಿಯ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.