
ಯುವತಿಯರ ರೇಪ್ ಮಾಡಿ ಪರಾರಿಯಾಗುತ್ತಿದ್ದ ಕಾಮುಕನನ್ನು ಫೇಸ್ ಬುಕ್ ರಿಕ್ವೆಸ್ಟ್ ಕಳುಹಿಸಿ ಬಲೆಗೆ ಬೀಳಿಸಿದ ಲೇಡಿ ಪೊಲೀಸ್!
Thursday, August 5, 2021
ದೆಹಲಿ: ದೆಹಲಿಯ ಗ್ಲಾಸ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಫೇಸ್ಬುಕ್ನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಖಾತೆಗಳನ್ನು ತೆರೆದು ಯುವತಿಯರು ಮತ್ತು ಅಪ್ರಾಪ್ತೆಯರಿಗಾಗಿ ಬಲೆ ಬೀಸುತ್ತಿದ್ದ. ನಂತರ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಅವರಿಂದ ಕಣ್ಮರೆಯಾಗುತ್ತಿದ್ದ.
ಇದೇ ರೀತಿಯಲ್ಲಿ 16 ವರ್ಷದ ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಆಕೆ ಗರ್ಭಿಣಿಯಾದ ಬಳಿಕ ಆತ ಪರಾರಿಯಾಗಿದ್ದ. ಹುಡುಗಿ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಹೋದಾಗ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಹುಡುಗಿಯನ್ನು ವಿಚಾರಣೆಗೊಳಪಡಿಸಿದಾಗ ಹಾಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಇದಾದ ಬಳಿಕ ಎಸ್ಐ ಪ್ರಿಯಾಂಕಾ ಆತನ ಫೇಸ್ಬುಕ್ ಪರಿಶೀಲಿಸಿ ಎಸ್ಐ ಪ್ರಿಯಾಂಕಾ ನಕಲಿ ಫೇಸ್ಬುಕ್ ಖಾತೆಯನ್ನು ತೆರೆದು ಯುವತಿಯೊಬ್ಬಳ ಫೋಟೋ ಹಾಕಿ ಆರೋಪಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ.ಆರಂಭದಲ್ಲಿ ಫೋನ್ ನಂಬರ್ ಮತ್ತು ಅಡ್ರೆಸ್ ನೀಡಲು ನಿರಾಕರಿಸುತ್ತಾನೆ. ವೈಯಕ್ತಿಕವಾಗಿ ನನ್ನನ್ನು ಭೇಟಿ ಆಗಬೇಕಾದರೆ ನನ್ನೊಂದಿಗೆ ನೀವು ಎಲ್ಲದರ ಬಗ್ಗೆ ಮಾತನಾಡಬೇಕು ಎಂದು ಷರತ್ತು ಹಾಕುತ್ತಾನೆ. ಅದಕ್ಕೆ ಒಪ್ಪಿಗೆ ನೀಡಿದ ಬಳಿಕ ಆರೋಪಿ ತನ್ನ ಫೋನ್ ನಂಬರ್ ಕೊಡುತ್ತಾನೆ.
ಜುಲೈ 31ರಂದು ಭೇಟಿಯಾಗೋಣ ಎಂದು ಪ್ರಿಯಾಂಕಾ ಶೈನಿ ಆತನಿಗೆ ಹೇಳುತ್ತಾರೆ. ಅದರಂತೆ ಆರೋಪಿ ದೆಹಲಿಯ ದಶರಥಪುರಂ ರೈಲು ನಿಲ್ದಾಣಕ್ಕೆ ಸಂಜೆ 7-30 ಕ್ಕೆ ಆಗಮಿಸುತ್ತಾನೆ. ಅಷ್ಟರಲ್ಲಾಗಲೇ ಪ್ರಿಯಾಂಕಾ ಅವರು ಸಿವಿಲ್ ಡ್ರೆಸ್ನಲ್ಲಿ ನಿಲ್ದಾಣದಲ್ಲಿ ಹೊಂಚು ಹಾಕಿ ನಿಂತಿದ್ದರು. ಅದನ್ನು ಕಂಡ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿ ಆತ ತಕ್ಷಣ ಮಹಾವೀರ್ ಎನ್ಕ್ಲೇವ್ ಬರುವಂತೆ ಹೇಳಿದ. ಬಳಿಕ ಅಲ್ಲಿಗೆ ಹೋದ ಪ್ರಿಯಾಂಕಾ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.