
ಭಗತ್ ಸಿಂಗ್ ನಂತೆ ನಟಿಸಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ..!
ಲಖನೌ: ಭಗತ್ ಸಿಂಗ್ ನಂತೆ ನಟಿಸಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾಬತ್ ಗ್ರಾಮದಲ್ಲಿ ನಡೆದಿದೆ.
ಶಿವಂ (10) ಹೆಸರಿನ ಬಾಲಕ ಮೃತ ದುರ್ದೈವಿ.ಆತ ಮತ್ತು ಆತನ ಸ್ನೇಹಿತರು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಗತ್ಸಿಗ್ ನಾಟಕ ಮಾಡಲು ಸಿದ್ಧತೆ ನಡೆಸಿದ್ದರು. ಈ ವೇಳೆಭಗತಸಿಂಗ್ ಗೆ ಶಿಕ್ಷೆ ಕೊಡುವ ಸನ್ನಿವೇಶವನ್ನು ಪ್ರಾಕ್ಟಿಸ್ ಮಾಡಲಾಗುತ್ತಿತ್ತು
ಭಗತ್ ಪಾತ್ರದಲ್ಲಿದ್ದ ಶಿವಂ ಸ್ಟೂಲ್ ಮೇಲೆ ನಿಂತು ನೇಣು ಹಾಕಿಕೊಂಡಿದ್ದಾನೆ. ಆ ವೇಳೆ ಸ್ಟೂಲ್ ಜಾರಿ ನೇಣು ಬಿಗಿಯಾಗಿದೆ. ಶಿವಂ ಒದ್ದಾಡಲಾರಂಭಿಸಿದಾಗ ಆತ ನಟನೆ ಮಾಡುತ್ತಿದ್ದಾನೆಂದುಕೊಂಡು ಅವನ ಸ್ನೇಹಿತರು ಸುಮ್ಮನಾಗಿದ್ದಾರೆ. ಆದರೆ ಯಾವಾಗ ಶಿವಂ ಉಸಿರು ನಿಲ್ಲಿಸಿ ದೇಹ ಅಲುಗಾಡುವುದು ನಿಂತಿತೋ ಆಗ ಸ್ನೇಹಿತರು ಗಾಬರಿಗೊಂಡು ಹೋಗಿ ಗ್ರಾಮಸ್ಥರನ್ನು ಕರೆ ತಂದಿದ್ದಾರೆ. ಆದರೆ ಊರವರು ಬರುವ ಮೊದಲೇ ಶಿವಂ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದೆ.