ಗಾಯಕ ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿಯಿಂದ ಲೈಂಗಿಕ ದೌರ್ಜನ್ಯ ಕೇಸ್ ದಾಖಲು..
Thursday, August 5, 2021
ಮುಂಬೈ: ಬಾಲಿವುಡ್‌ನ ಗಾಯಕ ಯೋ ಯೋ ಹನಿ ಸಿಂಗ್ ಅವರ ವಿರುದ್ಧ ಇದೀಗ ಅವರ ಹೆಂಡತಿ ಲೈಂಗಿಕ ದೌರ್ಜನ್ಯ ಕೇಸ್ ದಾಖಲು ಮಾಡಿದ್ದಾರೆ.
ಪತ್ನಿ ಶಾಲಿನಿ ತಲ್ವಾರ್ ಯೋ ಯೋ ವಿರುದ್ಧ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಹಾಗೂ ಆರ್ಥಿಕ ವಂಚನೆ ಪ್ರಕರಣ ಕೂಡ ದಾಖಲು ಮಾಡಿದ್ದಾರೆ.ಮಹಿಳೆಯರ ರಕ್ಷಣೆ ಕಾಯ್ದೆ ಅಡಿ ದೆಹಲಿಯ ಟಿಸ್ ಹಜಾರಿ ಕೋರ್ಟ್‌ನಲ್ಲಿ ಈ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ತಮಗೆ 20 ಕೋಟಿ ರೂಪಾಯಿ ಪರಿಹಾರ, ತಿಂಗಳಿಗೆ 5 ಲಕ್ಷ ರೂಪಾಯಿ ಹಣ, ಮುಂಬೈನ ಪ್ರತಿಷ್ಠಿತ ಜಾಗದಲ್ಲಿ ಫುಲ್ ಫರ್ನಿಷ್ ಆಗಿರುವ ಬಂಗಲೆ ನೀಡಲು ಆದೇಶಿಸಬೇಕು ಹಾಗೂ ತಾನು ಮದುವೆಯ ವೇಳೆ ನೀಡಿರುವ ವರದಕ್ಷಿಣೆಯನ್ನು ಹಿಂದಿರುಗಿಸಲು ಗಂಡನಿಗೆ ಆದೇಶಿಸಬೇಕು ಎಂದು ಶಾಲಿನಿ ಕೋರಿದ್ದಾರೆ. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್ ಯೋ ಯೋ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು ಇದೇ 28ರ ಒಳಗೆ ಉತ್ತರಿಸುವಂತೆ ಹೇಳಿದೆ.