-->

ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ನೀಡಲು ಹೊರಟಿರುವ ಪಾಕಿಸ್ತಾನ ಸರ್ಕಾರ: ಬಂಗಲೆ ಬಿಟ್ಟ ಇಮ್ರಾನ್ ಖಾನ್

ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ನೀಡಲು ಹೊರಟಿರುವ ಪಾಕಿಸ್ತಾನ ಸರ್ಕಾರ: ಬಂಗಲೆ ಬಿಟ್ಟ ಇಮ್ರಾನ್ ಖಾನ್

ದೆಹಲಿ: ಇಸ್ಲಮಾಬಾದ್​​ನ ರೆಡ್ ಝೋನ್​ ಏರಿಯಾದಲ್ಲಿದರುವ ಪಾಕಿಸ್ತಾನದ ಪ್ರಧಾನಿಯ ಸರಕಾರಿ ನಿವಾಸವನ್ನೀಗ ಬಾಡಿಗೆಗೆ ನೀಡಲಾಗುತ್ತಿದೆ. ಇದನ್ನು ಬಾಡಿಗೆಗೆ ಕೊಡುವ ಬಗ್ಗೆ ​ ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್​​ನಲ್ಲಿ ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನ ಸರ್ಕಾರಕ್ಕೀಗ ತೀವ್ರ ಹಣದ ಕೊರತೆಗಿದ್ದು, ಅದನ್ನು ನೀಗಿಸಲು, ಆದಾಯದ ಮೂಲವಾಗಿ ಈ ಸರ್ಕಾರಿ ನಿವಾಸವನ್ನು ಬಾಡಿಗೆಗೆ ಕೊಡಲಾಗುತ್ತದೆ ಎಂದು ಕ್ಯಾಬಿನೆಟ್​ ತಿಳಿಸಿದೆ.

ಅಷ್ಟಕ್ಕೂ ಯಾರೋ ಉಳಿದುಕೊಳ್ಳಲು ಇದನ್ನು ಬಾಡಿಗೆಗೆ ಕೊಡುತ್ತಿಲ್ಲ. ಬದಲಾಗಿ ಸಾಂಸ್ಕೃತಿಕ, ಫ್ಯಾಷನ್, ಶೈಕ್ಷಣಿಕ ಸೇರಿ ಇನ್ಯಾವುದೇ ತೆರನಾದ ಸಮಾರಂಭಗಳನ್ನು ನಡೆಸಲು ಬಾಡಿಗೆ ಕೊಡಲಾಗುವುದು ಎಂದು ಹೇಳಲಾಗಿದೆ. ಹೀಗೆ ಯಾವುದೇ ಸಮಾರಂಭಗಳನ್ನು ನಡೆಸಲು, ಪ್ರಧಾನಿ ಇಮ್ರಾನ್​ ಖಾನ್​ ನಿವಾಸವನ್ನು ಬಾಡಿಗೆ ಕೊಡುವ ಸಂದರ್ಭದಲ್ಲಿ ಅಲ್ಲಿನ ಶಿಸ್ತು-ಶಿಷ್ಟಾಚಾರಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು, ನಿರ್ವಹಣೆ ಮಾಡಲು ಎರಡು ಸಮಿತಿಯನ್ನು ರಚಿಸಲಾಗಿದೆ ಎಂದೂ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

ಪ್ರಧಾನಮಂತ್ರಿ ಇಮ್ರಾನ್​ ಖಾನ್​ರ ಸರ್ಕಾರಿ ನಿವಾಸವನ್ನು ಅತ್ಯಾಧುನಿಕ ಶಿಕ್ಷಣ ಸಂಸ್ಥೆಯನ್ನಾಗಿ ಮಾರ್ಪಾಡಿಸುವ ಯೋಜನೆ ಇದೆ ಎಂದು ಮೊದಲ ಬಾರಿಗೆ 2019ರ ಆಗಸ್ಟ್​​ನಲ್ಲಿ, ಪಾಕಿಸ್ತಾನ ತೆಹ್ರೀಕ್​-ಇ-ಇನ್​ಸಾಫ್​ ಸರ್ಕಾರ ಹೇಳಿತ್ತು.

ಹಾಗೇ, ಪಾಕ್​ನಲ್ಲಿ ವಸಹಾತುಶಾಹಿ ಸಂಸ್ಕೃತಿ ಹೋಗಲಾಡಿಸಲು ಮತ್ತು ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಾಜ್ಯಪಾಲರುಗಳು ಇನ್ನು ಮುಂದೆ ರಾಜಭವನಗಳಲ್ಲಿ ವಾಸಿಸುವಂತಿಲ್ಲ ಎಂದೂ ಸರ್ಕಾರ ಹೇಳಿತ್ತು. ಅದೇ ಸಮಯದಲ್ಲಿ ಇಮ್ರಾನ್ ಖಾನ್​ ಕೂಡ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದು, ಇಸ್ಲಮಾಬಾದ್​ನಲ್ಲಿರುವ ಬನಿ ಗಾಲಾದಲ್ಲಿರುವ ತಮ್ಮ ಮನೆಗೆ ಶಿಫ್ಟ್ ಆಗಿದ್ದರು. ಇನ್ನೊಂದು ಆಸಕ್ತಿದಾಯಕ ವಿಚಾರವೆಂದರೆ 2019ರಲ್ಲಿ, ಬಿಗ್ರೇಡಿಯರ್​ ವಾಸೀಮ್​ ಇಫ್ರಿಕಾರ್​ ಚೀಮಾ ಅವರ ಮಗಳ ಮದುವೆಗೆ ಇಮ್ರಾನ್​ ಸರ್ಕಾರಿ ಬಂಗಲೆಯನ್ನು ಬಾಡಿಗೆಗೆ ನೀಡಲಾಗಿತ್ತು. ಆ ಮದುವೆಯಲ್ಲಿ ಇಮ್ರಾನ್​ ಖಾನ್​ ಕೂಡ ಪಾಲ್ಗೊಂಡಿದ್ದರು. ಇನ್ನು ಈ ಬಂಗಲೆ ನಿರ್ವಹಣೆಗೆ ಏನಿಲ್ಲವೆಂದರೆ 470 ಮಿಲಿಯಲ್ ರೂಪಾಯಿ ಖರ್ಚಾಗುತ್ತದೆ. ಹಾಗಾಗಿ ಅವರು ನಿವಾಸ ತೊರೆದಿದ್ದಾರೆ ಎಂದು ಪಾಕಿಸ್ತಾನದ ಶಿಕ್ಷಣ ಸಚಿವ ಶಫ್ಕತ್ ಮೆಹಮೂದ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99