-->

MANGALORE-ಮುಂದೂಡಿಕೆಯಾಗಿದ್ದ  ಮಂಗಳೂರು ವಿವಿ ಪದವಿ ಪರೀಕ್ಷೆ ಡೇಟ್ ಫಿಕ್ಸ್- ಯಾವಾಗ ಎಕ್ಸಾಂ? , ಇಲ್ಲಿದೆ ಮಾಹಿತಿ

MANGALORE-ಮುಂದೂಡಿಕೆಯಾಗಿದ್ದ ಮಂಗಳೂರು ವಿವಿ ಪದವಿ ಪರೀಕ್ಷೆ ಡೇಟ್ ಫಿಕ್ಸ್- ಯಾವಾಗ ಎಕ್ಸಾಂ? , ಇಲ್ಲಿದೆ ಮಾಹಿತಿ

 




ಮಂಗಳೂರು: ಮಂಗಳೂರು  ವಿಶ್ವವಿದ್ಯಾನಿಲಯದ    ಮುಂದೂಡಿಕೆಯಾಗಿರುವ  ಉಳಿದಿರುವ  ಸ್ನಾತಕ ಹಾಗೂ  ಸ್ನಾತಕೋತ್ತರ  ಪದವಿ  ಪರೀಕ್ಷೆಗಳನ್ನು ಆಗಸ್ಟ್ 11 ರಿಂದ  ಮುಂದುವರಿಸುವಂತೆ  ವಿಶ್ವವಿದ್ಯಾಲಯದ  ಕುಲಸಚಿವರಿಗೆ  ಜಿಲ್ಲಾಧಿಕಾರಿ ಡಾ.  ರಾಜೇಂದ್ರ ಕೆ.ವಿ  ಅವರು  ಸೂಚಿಸಿದ್ದಾರೆ.





ಇಂದು   ಜಿಲ್ಲಾಧಿಕಾರಿಯವರ  ಕಚೇರಿ  ಸಭಾಂಗಣದಲ್ಲಿ  2021ರ  ಸ್ನಾತಕ  ಹಾಗೂ  ಸ್ನಾತಕೋತ್ತರ  ಪದವಿ  ಪರೀಕ್ಷೆಗಳ  ಮುಂದುವರಿಕೆ  ಸಂಬಂಧ   ನಡೆದ  ಸಭೆಯಲ್ಲಿ  ಅಧ್ಯಕ್ಷತೆ  ವಹಿಸಿ  ಮಾತನಾಡಿದ  ಅವರು  ಮಂಗಳೂರು ವಿವಿ  ಅಧಿಕಾರಿಗಳಿಗೆ  ಈ  ಸೂಚನೆ  ನೀಡಿದ್ದಾರೆ

ನೆರೆಯ ಕೇರಳ ರಾಜ್ಯದಲ್ಲಿ  ಕೊರೊನಾ ಪ್ರಕರಣಗಳು ತೀವ್ರಗೊಂಡ ಕಾರಣ ಕಾಸರಗೋಡಿಗೆ ಸರಕಾರಿ ಹಾಗೂ ಖಾಸಗಿ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ, ಗಡಿಗಳ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅನಗತ್ಯ ಸಂಚಾರವನ್ನು ರದ್ದು ಪಡಿಸಲಾಗಿದೆ, ಆದ ಕಾರಣ ಕೇರಳ ರಾಜ್ಯದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಕಷ್ಟ ಸಾಧ್ಯವಾದ ಕಾರಣ, ಆಗಸ್ಟ್ 4 ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಆಗಸ್ಟ್ 11 ರಂದು ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಿದ್ದಲ್ಲೀ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ




 ಪದವಿ ಪರೀಕ್ಷೆಗಳಲ್ಲಿ ವಹಿಸಲಾದ ಅಸೈನ್ಮೆಂಟ್ಗಳನ್ನು ಆನ್ಲೈನ್ ಅಥವಾ ಅಂಚೆ ಮೂಲಕ ಸಂಬಂಧಿಸಿದ ಕಾಲೇಜುಗಳಿಗೆ ತಲುಪಿಸಲು ಅವಕಾಶ ನೀಡಬೇಕು, ಪದವಿ ಪರೀಕ್ಷೆಗಳಿಗೆ ಹಾಜರಾಗಲು ಇಚ್ಛಿಸುವ ಕೋವಿಡ್ ಸೋಂಕಿತ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ತಿಳಿಸಿದರು.





ಜಿಲ್ಲೆಯಲ್ಲಿ 29,052 ಪದವಿ ವಿದ್ಯಾರ್ಥಿಗಳು, 5,493 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಕೇರಳದ 2000 ವಿದ್ಯಾರ್ಥಿಗಳು (ಪದವಿ ಪರೀಕ್ಷೆ) ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ, ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಎಚ್ಚರ ವಹಿಸಬೇಕು, ಯಾವುದೇ ರೀತಿಯ ದಂಡವನ್ನು  ವಿಧಿಸದಂತೆ ಎಲ್ಲಾ ಕಾಲೇಜಿನ ಪ್ರಾಂಶುಪಾಲರಿಗೆ ಅವರು ಸೂಚನೆ ನೀಡಿದ್ದಾರೆ

ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ () ಡಾ.ಪಿ.ಎಲ್. ಧರ್ಮ, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ.ಜಯಕರ ಭಂಡಾರಿ. ಎಂ, ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಕಾರ್ಯದರ್ಶಿ (ಎನ್..ಸಿ) ಫಾರೂಕ್ ಬಾಯಬೆ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ದೇವಿಪ್ರಸಾದ್ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99