ಸ್ವಾತಂತ್ರ್ಯ ದಿನಾಚರಣೆಯಂದೇ ಲಾಂಚ್ ಆಗಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್
ಈ ಎಲೆಕ್ಟ್ರಿಕ್ ಸ್ಕೂಟರ್ ಗೆ ನೂತನ ಸ್ಕೂಟರ್ ಕೇಂದ್ರದ FEMA-II ಎಲೆಕ್ಟ್ರಿಕ್ ವಾಹನ ಯೋಜನೆಯಡಿ 50 ರಿಂದ 52,000 ರೂ. ಸಬ್ಸಡಿ ಪಡೆಯವ ಸಾಧ್ಯತೆ ಹೆಚ್ಚು ಇದೆ. ಈ ಸ್ಕೂಟರ್ ಕೇಂದ್ರದ ಯೋಜನೆಗೆ ಅನುಗುಣವಾಗಿರುವ ಕಾರಣ ಹೆಚ್ಚಿನ ಸಬ್ಸಡಿ ಪಡೆಯಲಿದೆ. ಹೀಗಾಗಿ ಸ್ಕೂಟರ್ ಬೆಲೆ 1 ಲಕ್ಷ ರೂ. (ಎಕ್ಸ್ ಶೋ ರೂಂ) ಆಸುಪಾಸಿನಲ್ಲಿರಲಿದೆ.
ಸಬ್ಸಿಡಿ ರಹಿತ ಸ್ಕೂಟರ್ ಬೆಲೆ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸ್ಕೂಟರ್ ಗೆ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಗರಿಷ್ಠವಾಗಿದೆ. ಮತ್ತೊಂದು ವಿಶೇಷವೆಂದರೆ 18 ನಿಮಿಷ ಚಾರ್ಜ್ ಮಾಡಿದಲ್ಲಿ ಸುಮಾರು 75 ಕಿ.ಮೀ ಪ್ರಯಾಣ ಮಾಡುವ ಸಾಮರ್ಥ್ಯ ಈ ಸ್ಕೂಟರ್‌ಗಿದೆ. ಬ್ಯಾಟರಿ ಪ್ಯಾಕ್ ಅನುಗುಣವಾಗಿ ಓಲಾ S, S1 ಹಾಗೂ S1 Pro ಎಂಬು ಮೂರು ವೇರಿಯೆಂಟ್ ಸ್ಕೂಟರ್ ಲಭ್ಯವಿದೆ. ಮೂರು ಸ್ಕೂಟರ್ ಮೈಲೇಜ್ ಹಾಗೂ ಬೆಲೆಯಲ್ಲೂ ವ್ಯತ್ಯಾಸವಾಗಲಿದೆ.