-->

ಮಂಗಳೂರಿನಲ್ಲಿ ಕುಸಿದು ಬಿದ್ದು 9 ವರ್ಷದ ಹುಲಿ  ಸಾವು

ಮಂಗಳೂರಿನಲ್ಲಿ ಕುಸಿದು ಬಿದ್ದು 9 ವರ್ಷದ ಹುಲಿ ಸಾವು


ಮಂಗಳೂರು; ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷದ ಹುಲಿ " ಓಲಿವರ್ "  ಸೋಮವಾರ ಮುಂಜಾನೆ ಮೃತ ಪಟ್ಟಿದೆ . 

ಆರೋಗ್ಯವಾಗಿ ಸದೃಢವಾಗಿದ್ದ ಹುಲಿಯು ಮುಂಜಾನೆವರೆಗೆ ಚುರುಕಾಗಿದ್ದು . ಒಮ್ಮಿಂದೊಮ್ಮೆಲೇ ಕುಸಿದು ಬಿದ್ದು ಮೃತ ಪಟ್ಟಿದೆ . ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು , ಚಿಕಿತ್ಸೆ ನೀಡಿದರೂ ಫಲಪ್ರದವಾಗಿಲ್ಲ . 

ಹುಲಿಯು ಪಿಲಿಕುಲದ ' ವಿಕ್ರಮ ' ಮತ್ತು ಶಾಂಭವಿ ' ಗೆ ಜನಿಸಿದ 2 ಮರಿಗಳಲ್ಲಿ ಒಂದಾಗಿದೆ . ಪಿಲಿಕುಳದಲ್ಲಿ ಸದ್ಯ 12 ಹುಲಿಗಳು ಇವೆ . ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗಾಗಿ IAH & VB ಬೆಂಗಳೂರು ಮತ್ತು ಉತ್ತರ ಪ್ರದೇಶದ IVRI ಗೆ ಕಳುಹಿಸಲಾಗಿದೆ . ಕೊರೊನಾ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ NIHSAD ಗೆ ಕಳುಹಿಸಲಾಗಿದೆ .  ಮೃಗಾಲಯದಲ್ಲಿ ಅನುಮಾನಸ್ಪದ ಯಾವುದೇ ರೋಗವು ಹರಡದಂತ ರೋಗ ನಿರೋಧಕ ದ್ರಾವಣವನ್ನು ಪ್ರಾಣಿಗಳ ಆವರಣದ ಒಳಗೆ ಮತ್ತು ಸುತ್ತ ಮುತ್ತ ಸಿಂಪಡಿಸಲಾಗುತ್ತಿದೆ  ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ . ಜೆ . ಭಂಡಾರಿ  ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99