ಸಿ ಎಂ ಇಬ್ರಾಹಿಂ ಗೆ ಠಕ್ಕರ್ ನೀಡಲು ಖಾದರ್ ಗೆ ಸಿಕ್ಕಿತು ಮಹತ್ವದ ಸ್ಥಾನ
Sunday, January 30, 2022
ಮಂಗಳೂರು; ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಯು ಟಿ ಖಾದರ್ ಅವರಿಗೆ ವಿಧಾನಸಭೆಯ ವಿಪಕ್ಷ ಉಪನಾಯಕ ಸ್ಥಾನ ದೊರೆತಿದೆ.
ಈ ಸ್ಥಾನಕ್ಕೆ ಪೈಪೋಟಿಯನ್ನು ನಡೆಸದೆ, ಲಾಭಿಯನ್ನು ಮಾಡದೆ ಯು ಟಿ ಖಾದರ್ ಅವರು ಮಹತ್ವದ ಸ್ಥಾನ ಪಡೆದುಕೊಂಡಿದ್ದಾರೆ. ವಿಧಾನಸಭೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕರು ಇದ್ದರೂ ಯು ಟಿ ಖಾದರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರದ ಸ್ಥಾನ ಸಿಕ್ಕಿದೆ.
ಈ ಮಹತ್ವದ ಸ್ಥಾನ ಸಿಗಲು ಸಿ ಎಂ ಇಬ್ರಾಹಿಂ ಅವರ ಮುನಿಸು ಕೂಡ ಕೆಲಸ ಮಾಡಿದೆ. ವಿಧಾನಪರಿಷತ್ ಗೆ ವಿಪಕ್ಷ ನಾಯಕನಾಗಲು ಹವಣಿಸಿದ್ದ ಸಿ ಎಂ ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಕೈಕೊಟ್ಟಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಗರಂ ಆಗಿರುವ ಸಿ ಎಂ ಇಬ್ರಾಹಿಂ ಜೆಡಿಎಸ್ ಹೊಸ್ತಿಲಲ್ಲಿ ನಿಂತಿದ್ದಾರೆ. ಇದರಿಂದಾಗಿ ಮುಸ್ಲಿಂ ಮತದ ಮೇಲೆ ಪರಿಣಾಮವಾಗುವ ನಿಟ್ಟಿನಲ್ಲಿ ವಿಧಾನಪರಿಷತ್ ನ ವಿಪಕ್ಷ ಉಪನಾಯಕನ ಸ್ಥಾನವನ್ನು ಮುಸ್ಲಿಂ ಸಮುದಾಯದ ಶಾಸಕರಿಗೆ ನೀಡಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿತ್ತು. ಅದರಂತೆ ಮೊದಲಿಗೆ ಈ ಸ್ಥಾನ ಜಮೀರ್ ಅಹ್ಮದ್ ಗೆ ನೀಡುವ ಬಗ್ಗೆ ಚರ್ಚೆಗಳಾಗಿತ್ತು. ಆದರೆ ಜಮೀರ್ ಅಹ್ಮದ್ ಈ ಸ್ಥಾನ ಒಪ್ಪದೆ ಇದ್ದ ಕಾರಣ ಯು ಟಿ ಖಾದರ್ ಅವರಿಗೆ ಒಲಿದಿದೆ.
ಯು ಟಿ ಖಾದರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರು. ಇವರಿಗೆ ಈ ಮಹತ್ವದ ಸ್ಥಾನ ನೀಡುವ ಮೂಲಕ ಕರಾವಳಿ ಯಲ್ಲಿ ಪಕ್ಷವನ್ನು ಬಲವರ್ಧಿಸುವ, ಮುಸ್ಲಿಂ ಸಮುದಾಯ ಪಕ್ಷದ ಮೇಲೆ ಮುನಿಸದಂತೆ ಹೈಕಮಾಂಡ್ ಈ ಲೆಕ್ಕಾಚಾರ ಮಾಡಿ ಖಾದರ್ ಗೆ ಮಹತ್ವದ ಸ್ಥಾನ ನೀಡಿದೆ.