-->

ದೇವಮಾನವನಿಗೆ ಪುತ್ರಿಯನ್ನು ದಾನ ಮಾಡಲು ಆಕೆ ವಸ್ತುವಲ್ಲ : ಕೋರ್ಟ್ ಚಾಟಿ

ದೇವಮಾನವನಿಗೆ ಪುತ್ರಿಯನ್ನು ದಾನ ಮಾಡಲು ಆಕೆ ವಸ್ತುವಲ್ಲ : ಕೋರ್ಟ್ ಚಾಟಿ

 ಮುಂಬಯಿ : ಯಾರಿಗಾದರೂ ದಾನವಾಗಿ ನೀಡಲು ಹೆಣ್ಣು ಮಗಳು ವಸ್ತುವಲ್ಲ ಎಂದು ಮುಂಬಯಿ ಹೈಕೋರ್ಟ್‌ನ ಔರಂಗಾಬಾದ್ ವಿಭಾಗೀಯ ಪೀಠವು ಹೇಳಿದೆ .

 ಸ್ವಯಂ ಘೋಷಿತ ದೇವಮಾನವ ಎನಿಸಿರುವ ಶಂಕೇಶ್ವರ್ ಢಾಕ್ರೆಗೆ ಅವರ ಭಕ್ತ ಸೊಪನ್ ಢಾಂಕೆ ಎಂಬಾತ ತನ್ನ 17 ವರ್ಷದ ಮಗಳನ್ನು ದಾನವಾಗಿ ಒಪ್ಪಿಸಿದ್ದ . ಇದರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ನ್ಯಾ . ವಿಭಾ ಕಂಕಣ್‌ವಾಡಿ ಅವರು ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ . 

ಜಿಲ್ಲಾ ಜಿಲ್ಲೆಯ ಬದಾಪುರದ ಮಂದಿರವೊಂದರಲ್ಲಿ ವಾಸವಿದ್ದ ದೇವಮಾನವನ ಜತೆಗೆ ತಂದೆ - ಮಗಳು ವಾಸವಿದ್ದರು . 2021 ರ ಆಗಸ್ಟ್‌ನಲ್ಲಿ ಅಪ್ರಾಪ್ತ ಬಾಲಕಿಯು ದೇವಮಾನವ ಹಾಗೂ ತಂದೆ ಇಬ್ಬರೂ ಸೇರಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿ ದ್ದಳು . ಆ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ .
 ಈ ವೇಳೆ , 2018 ರಲ್ಲಿ ಮಗಳನ್ನು ದೇವ ಮಾನವನಿಗೆ ದಾನ ನೀಡಿದ ಸಂಬಂಧ 100 ರೂ . ಮುಖಬೆಲೆಯ ಛಾಪಾ ಕಾಗದದ ದಾಖಲೆಯೊಂದನ್ನು ಆರೋಪಿಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99